ಚೇಳು ಅಥವಾ ಎಮ್ಮೀರಿಕಾ (scorpian) ಬಲು ಅಪರೂಪದ ಜೀವಿ. ಹೆಚ್ಚಾಗಿ ಒಣ ಪ್ರದೇಶದಲ್ಲಿ ವಾಸಿಸುತ್ತದೆ. ಸಾಮಾನ್ಯವಾಗಿ ಅರ್ಧ ಸೆಂಟಿ ಮೀಟರ ನಿಂದ ಐದಿನೈದು ಸೆಂಟಿ ಮೀಟರ ವರಗೂ ಕಾಣಸಿಗುತ್ತವೆ. ಇವುಗಳನ್ನು ಕೋತಿ, ಹಲವು ಬಗೆಯ ಪಕ್ಷಿಗಳು ತಿನ್ನುತ್ತವೆ. ಮರಿಗಳು ಐದಿನೈದು ರಿಂದ ಇಪ್ಪತ್ತು ದಿನಗಳ ಕಾಲ ತಾಯಿಯ ಬೆನ್ನ ಮೇಲೆ ಜೀವಿಸುತ್ತೇವೆ. ವಿಷ ಮಾತ್ರ ಬಾಲದಲ್ಲಿರುತ್ತದೆ. ವಿಷವು ಎರಡು ಬಗೆಯಲ್ಲಿ ಕೆಲಸ ಮಾಡುತ್ತದೆ. ಒಂದು ಬಗೆಯ ವಿಷ ಬಾವು ಮತ್ತು ಉರಿಯೂತ ಉಂಟು ಮಾಡುತ್ತದೆ. ಆದರೆ ಇನ್ನೊಂದು ವಿಷ ದೇಹದಲ್ಲಿ ಸೇರಿ ಅಪಸ್ಮಾರ (epilapsy) ಉಂಟು ಮಾಡುತ್ತದೆ. ಉದ್ದವಾದ ಮತ್ತು ಕರಿ ಚೇಳು ಕಚ್ಚಿದರೆ ಉಸಿರಾಟದ ತೊಂದರೆಯಿಂದ ಸಾವನ್ನಪ್ಪುವ ಸಾಧ್ಯತೆಗಳೂ ಹೆಚ್ಚು. ಗ್ರಾಮೀಣ ಪ್ರದೇಶದಲ್ಲಿ ಚೇಳು ಕಚ್ಚಿದರೆ ಬಿಳಿ ಈರುಳ್ಳಿಯನ್ನು (white onion) ಲೇಪನ ಮಾಡುತ್ತಾರೆ. ಬಿಳಿ ಈರುಳ್ಳಿ ವಿಷಕೊಳ್ಳುತ್ತದೆ.
ಮಂಜುನಾಥ ಹೊಳಲು
No comments:
Post a Comment