Search This Blog

Sunday, September 21, 2014

Promotion of “Drought proofing agriculture”

ಕೃಷಿಯಿಂದ ರೈತರು ವಿಮುಕ್ತರಾಗಲು ಸರ್ಕಾರದ ನೀತಿಗಳೇ ಕಾರಣ. ಬೆಳೆದ ಬೆಳೆಗೆ ಸರಿಯಾದ ಬೆಲೆ ಕೊಡದ ಸರ್ಕಾರದ ನೀತಿಗಳು ನಮಗೆ ಬೇಡವೇ ಬೇಡ. ಸರಿಯಾದ ಸಮಾಜಿಕ ಭಧ್ರತೆ ಕೊಡ ಇಲ್ಲ. ಯಾರ ಹಂಗನ್ನು ಕೇಳದ ರೈತರು ಇವತ್ತು ಪರಿಸರ ಅಸಮತೋಲನ ಹಾಗು ಕೆಟ್ಟ ನೀತಿಗಳಿಂದ ಜೀವನ ದುಸ್ಥರವಾಗಿದೆ. ಸಾಲದ ಶೂಲೆ, ಹಸಿವು, ಸರಿಯಾದ ಬೆಲೆಇಲ್ಲ, ಮಕ್ಕಳಿಗೆ ಶಿಕ್ಷಣ ಕೊಡಿಸಲು ಆಗುತ್ತಿಲ್ಲ, ಕುಡಿಯಲು ನೀರು ಇಲ್ಲ, ಲಾಭರಹಿತ ದುಡಿಮೆ, ಅನೇಮಿಯಾ.... ಹೀಗೆ ಅನೇಕ ಸಮಸ್ಯೆಗಳಿಂದ ರೈತರ ಬದುಕು ಚಿಂತಾಜನಕವಾಗಿದೆ. ಕೃಷಿ ಸಹವಾಸವೇ ಬೇಡವೆಂದು ತಮ್ಮ ಮಕ್ಕಳನ್ನ ಕೆಲಸ ಮಾಡಲು ನಗರಗಳಿಗೆ ಕಳುಹಿಸುತ್ತಾರೆ. ಇತ್ತ ನಗರದಲ್ಲಿ ಬದಕಲಾರದೇ ಅತ್ತ ಹಳ್ಳಗೂ ಹೋಗಲಾರದೇ ನರಕಯಾತನೆಯಲ್ಲಿ ಹಳ್ಳಿ ಹುಡುಗ/ಗಿಯರು ಜೀವನ ಮಾಡುತ್ತಿದ್ದಾರೆ. ಯಾವುದೇ ಗಟಾರ ಮೂಲೆಯ ಪಕ್ಕದ ಸಣ್ಣ ಕೋಣೆಯಲ್ಲಿ ಮನೆ ಮಾಡಿಕೊಂಡು, ಸಿಕ್ಕ-ಸಿಕ್ಕ ಆಹಾರವನ್ನು ತಿಂದು, ಏನೆ ಕೆಲಸ ಕೊಟ್ಟರು ಮಾಡುತ್ತಾ... ಅತಂತ್ರ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದಾರೆ. ಕೃಷಿ ಲಾಭವಾಗದೇ, ಪರಿಸರಕ್ಕೆ ಎಲ್ಲಾ ರೀತಿಯ ವಿಷಗಳನ್ನು ಸೇರಿಸುತ್ತಾ, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ, ಹಾಕಿದ ಮೂಳೆಕೆ ಬರದೇ..... ಕೃಷಿ ಯಾತನಮಯವಾಗಿದೆ. ರೈತ ನೆಮ್ಮದಿಯಿಂದ ಬಾಳಲು ಈ ಕೆಳಗಿನ ದಶ ಸೂತ್ರಗಳು ಬೇಕಾಗಿವೆ.

1. Stop GMOs in agriculture
2. Start Farmers Welfare Department
3. Making “agriculture profession” among youth
4. Promotion of “Drought proofing agriculture” with watershed concepts
5. support good price for all crops
6. Involve “more youths” in agriculture (create programs)
7. Minimize funding for SAUs and Research Institutes
8. Promote ecological/organic/sustainable farming
9. Promotion of community seed banks and kitchen-herbal garden across all GP
10. Promote TBFS agriculture

ಹಸಿವು

ಹಸಿವು ಹಸಿವು... ತಾಯಿಯ ಮೊಲೆ ಹಾಲು ಬತ್ತಿವೆ
ಕುಡಿಯಲು ನೀರು ಆಹಾರವಿಲ್ಲ... ಆದರೂ ಬದಕಬೇಕು
ಚುನಾವಣೆ ಬಂದಾಗ ಓಟು ಹಾಕಲು
ಮತ್ತೆ ಅದೇ ಹಸಿವು ಹಸಿವು....

ರಸ್ತೆಯಲ್ಲೇ ಜೀವನ.... ರಸ್ತೆಯಲ್ಲೇ ಬದುಕು
ರಸ್ತೆ ನನಗೆ ದಾರಿ.. ಮನೆ... ಬಾರ್... ಹೋಟಲ್.. ಮಂದಿರ
ಆದರೆ ಈಗ ಅದಕ್ಕೂ ಬಂತು ಕುತ್ತು
ಅದುವೇ ರಸ್ತೆ ಅಗಲೀಕರಣ ಎಂಬ ಪೆಡಂಭೂತ

ನನ್ನ ಬದುಕು ಚಿಲ್ಲರೆ.. ಚಿಲ್ಲರೆ
ಜೀವನ ಪ್ರಾರಂಭವಾಗುವುದೇ ರಸ್ತೆ ಬದಿ ಚಿಲ್ಲರೆ ಅಂಡಿಯಿಂದ
ಅನ್ನ...ನೀರು ಸಿರುವುದೇ ಚಿಲ್ಲರೆ ಅಂಗಡಿಯವರು ಕೊಡುವ ದಾನದಿಂದ
ಈಗ ಅದರ ಮೇಲೂ ಕಣ್ಣು... ಹಾಗಾದರೆ ನಾನು ಎಲ್ಲಿ ಜೀವನ ಮಾಡಲಿ