Search This Blog

Sunday, August 24, 2014

ರೈತಾಪಿ ಸಮಾಜವು ಅನುಭವಿಸುತ್ತಿರುವ ಸಾಮಾಜಿಕ ಸಮಸ್ಯೆಗಳಾವು? ರೈತ ಸಮುದಾಯದಲ್ಲಿ ಆಧುನಿಕ ಕೃಷಿಯ ಅವಘಡದಿಂದ ಆಂತಕ ಸೃಷ್ಟಿಯಾಗಿದೆ. ನಾಳಿನ ಜೀವನದ ಬಗ್ಗೆ ಭಯ ಪ್ರಾರಂಭವಾಗಿದೆ. ಗ್ರಾಮೀಣ ಯುವಜನರು ನಗರದತ್ತ ಮುಖ ಮಾಡಿರುವುದರಿಂದ! ಹಳ್ಳಿಗಳಲ್ಲಿ ಹೊಸತನ ನಿಂತಿದೆ. ರೈತ ಸಮುದಾಯದ ಒಳ/ಹೊರ ಮನಸ್ಸಿನ ಗೊಂದಲಗಳನ್ನು ಅರ್ಥಮಾಡಿಕೊಂಡು ಮುನ್ನೆಡೆಸುವ ನಾಯಕತ್ವ ಬೇಕಾಗಿದೆ. ಅರ್ಥಹೀನ ಕೃಷಿನೀತಿಗಳು ರೈತರನ್ನು ಮತ್ತಷ್ಟು ನಿದ್ದೆಗೇಡಿಸಿವೆ. ಕೃಷಿಯಿಂದ ಯುವಜನರು ವಿಮುಖವಾಗುತ್ತಿರುವುದು ದುರದೃಷ್ಟಕರ.... ಮತ್ತೆ ಯುವಜನರು ಕೃಷಿ ಕಡೆಗೆ ಹೆಜ್ಜೆ ಹಾಕಬೇಕಾಗಿದೆ.... ಆ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಹಾಗು ಇಲಾಖೆ ಕೆಲಸ ಮಾಡಬೇಕಾಗಿದೆ. ಕೇವಲ ತಾಂತ್ರಿಕತೆ ವರ್ಗಾವಣೆ ಮಾಡಿದರೆ ಸಾಲದು ..... ಕೃಷಿಕರೊಂದಿಗೆ ಬೆರೆತು.. ಅರೆತು.. ಮುನ್ನುಗ್ಗಿಕೊಂಡು ಕೆಲಸಮಾಡಬೇಕಾಗಿದೆ. ಕೃಷಿ ಇಲಾಖೆಯಯೊಂದಿಗೆ ನನ್ನ ಆರು ತಿಂಗಳ ಅನುಭವ ನೋಡಿದರೆ ಮತ್ತಷ್ಟು ಹೆದರಿಕೆ ಪ್ರಾರಂಭವಾಗಿದೆ................
ಅನ್ನಕ್ಕೆ ವಿಷ ಉಣ್ಣುಸುವ
ಅಂರ್ತಜಲಕ್ಕೆ ಕನ್ನ ಹಾಕುವ
ಜಲ ಮಲೀನ ಮಾಡುವ
ಗಾಳಿಗೆ ವಿಷ ಸೇರಿಸುವ
ಕರೆದು ನರಕಕ್ಕೆ ಕಳುಹಿಸು ಎಂದ ಮಂಜುನಾಥ
- ಮಂಜುನಾಥ ಹೊಳಲು