Search This Blog

Tuesday, May 17, 2011

ಗ್ಯಾಸ್ ತೊಂದರೆಯೇ?

ಗ್ಯಾಸ್ ತೊಂದರೆಯೇ? ಹೊಟ್ಟೆ ಭಾರವೇ? ಹೊಟ್ಟೆಯಲ್ಲಿ ಗ್ಯಾಸ್ ಬಲು ತೊಂದ್ರೆ ಕೊಡುತ್ತದೆಯೇ?. ಸಭೆಯಲ್ಲಿ-ಜನರು ಬಳಿ ಇರುವಾಗ-ಕೆಲಸದಲ್ಲಿ ಮೂಗು ಮುಚ್ಚಿಕೊಳ್ಳುವ ಸಂಗತಿಯೇ? ಇದು ಸಾಮಾನ್ಯ ಸಮಸ್ಯೆಯಾದರು ಮಾನಸಿಕಯಾತನೆ ಬಹಳ. ಗ್ಯಾಸ್ ತೊಂದರೆ ಇದ್ದಾಗ ಊಟವನ್ನು ಕಡಿಮೆ ಮಾಡಬೇಕಾಗುತ್ತದೆ. ಗಾಬರಿ ಬೇಡ, ಮಾನಸಿಕವಾಗಿ ಹಿಂಸೆಯು ಬೇಡ. ಸರಳ ಮತ್ತು ಮನೆಯಲ್ಲೇ ಇದಕ್ಕೆ ಪರಿಹಾರ ಉಂಟು.

ಒಣ ಶುಂಠಿಯನ್ನು (Dry Ginger) ಚೆನ್ನಾಗಿ ತೊಳೆದುಕೊಳ್ಳಿ. ಒಣ ಶುಂಠಿಯ ಕಷಾಯವನ್ನು ಮಾಡಿಕೊಂಡು ಪ್ರತಿದಿನ ಮೂರುಬಾರಿ ಸ್ವಲ್ಪ-ಸ್ವಲ್ಪ ಕುಡಿಯುತ್ತಾ ಬನ್ನಿ. ಗ್ಯಾಸ್ ತೊಂದರೆಯಿಂದ ಪರಿಹಾರ ಪಡೆದುಕೊಳ್ಳಿರಿ.

ಕಷಾಯ ತಯಾರಿಸಿವ ಬಗೆ - ಒಂದು ಭಾಗ ಒಣ ಶುಂಠಿ, ನಾಲ್ಕು ಭಾಗ ನೀರು ತೆಗೆದುಕೊಂಡು ನಿಧಾನವಾಗಿ ಪಾತ್ರೆಯಲ್ಲಿ ಕುದಿಸಬೇಕು. ಒಟ್ಟು ನಾಲ್ಕು ಭಾಗದಿಂದ ಒಂದು ಭಾಗ ಆಗುವರೆಗೂ ಕುದಿಸಬೇಕು. (ನಾಲ್ಕು ಲೋಟ ನೀರು ಹಾಕಿದರೆ, ಒಂದು ಲೋಟ ಬರುವ ತನಕ ಕುದಿಸಬೇಕು) ಒಮ್ಮೆ ಕಷಾಯ ಮಾಡಿದರೆ ಅದನ್ನು ಅವತ್ತೆ ಕುಡಿದು ಮುಗಿಸಬೇಕು. ಫ್ರೀಜ್ ನಲ್ಲಿ ಇಟ್ಟುಕೊಂಡು ಕುಡಿಯಬಾರದು. ಬೇಸಿಗೆಯಲ್ಲಿ ಒಣ ಶುಂಠಿಯ ಕಷಾಯ ದೇಹಕ್ಕೆ heat, ಆದ್ದರಿಂದ ಬೇಸಿಗೆಯಲ್ಲಿ ಕಷಾಯವನ್ನು ದಿನಕ್ಕೆ ಒಂದು ಬಾರಿ ಮಾತ್ರ ಕುಡಿಯಿರಿ. ಏಳು ದಿನಗಳವರೆಗೂ ಕಷಾಯ ಕುಡಿಯಿರಿ.

ಹಾಗೇ ಸುಮ್ಮನೆ -  ಶುಂಠಿಯು ಕೆಲ ಬಗೆಯ ಅತಿಸಾರಕ್ಕೆ ಪರಿಣಾಮಕಾರಿ. ಅಲ್ಲದೆ ಸಮುದ್ರಯನದಿಂದ ಉಂಟಾಗುವ ತಲೆಸುತ್ತುವಿಕೆ, ಸಾಮಾನ್ಯ ಹೊಟ್ಟೆನೋವಿಗೆ ಉತ್ತಮ ಶಮನ ನೀಡುತ್ತದೆ.

No comments:

Post a Comment