Search This Blog

Friday, May 20, 2011

ಜಾನಪದ ಲೋಕದಲ್ಲಿ ಮಾವು ಹಬ್ಬ

ಜಾನಪದ ಲೋಕದಲ್ಲಿ ಇವತ್ತಿನಿಂದ ಏಳು ದಿನಗಳವರಗೆ (20 - 05 - 2011 ರಿಂದ 27 - 05 - 2011)    ಮಾವು ಪರಿಷೆ ನಡೆಯುತ್ತಿದೆ. ಜಿಲ್ಲಾ ತೋಟಗಾರಿಕೆ ಇಲಾಖೆ,  ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗು ಜಿಲ್ಲಾ ಕೃಷಿ ಇಲಾಖೆ ವತಿಯಿಂದ ಜಾನಪದ ಲೋಕದಲ್ಲಿ ಮಾವು ಪರಿಷೆ ಹಮ್ಮಿಕೊಂಡಿದ್ದಾರೆ. ರಾಮನಗರದ ಶಾಸಕ ಕೆ. ರಾಜು ಹಾಗು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಸಮಾರಂಭದಲ್ಲಿ ಕಾಣಿಸಿಕೊಂಡರು. ಸುಮಾರು 50 ರಿಂದ ೬೦ ರೈತರು ಸಮಾರಂಭದ ಸದುಪಯೋಗ ಪಡೆದುಕೊಂಡರು. ರೈತರನ್ನು ಉದ್ಧೇಶಿಸಿ ರಾಮನಗರದ ಶಾಸಕ ಕೆ. ರಾಜುರವರು ಮಾತನಾಡಿದರು. ಸಾವಯವ ರೀತಿಯಲ್ಲಿ ಮಾವು ಬೆಳೆಯಿರಿ ಹಾಗು ತೆಂಗಿನ ಎಣ್ಣೆ ಬಳಸುವುದರಿಂದ ರಕ್ತ ಒತ್ತಡ ಖಾಯಲೆ ಬರುವುದಿಲ್ಲ. ಅದು ಕೇವಲ್ WTO             ಒಂಪ್ಪದದ ನಂತರ ಮಾಡಿದ ಷಂಡತ್ರ. ಅದಕ್ಕೆ ಅವರು ಪೇಪರಿನಲ್ಲಿ ಪ್ರಕಟವಾದ ಲೇಖನವನ್ನು ಪ್ರಸ್ತಾಪಿಸಿದರು. ಆದ್ದರಿಂದ ಹೆಚ್ಚು-ಹೆಚ್ಚು ತೆಗಿನ ಎಣ್ಣೆಯನ್ನು ಬಳಸಬಹುದು ಎಂದು ರೈತರಿಗೆ ಕಿವಿಮಾತು ಹೇಳಿದರು. ನಂತರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಯವರು ರೈತರನ್ನು ಉದ್ದೇಶಿಸಿ ಮಾತನಾಡಿದರು. ಅವರ ಮಾತಿನಲ್ಲಿ ಅಂತಾ ಸಾವಯವ ಕೃಷಿಗೆ ಒತ್ತು ಕೊಡದಿದ್ದರು, ರಾಮನಗರ ಜಿಲ್ಲಾ ಮಾವು ಬೆಳೆಗಾರರ ಹೊರತಂದಿರುವ ನೂತನ ’ರಾಮ್ ಗೋಲ್ಡ’ ಮಾವು ಬ್ರಾಡ್ ಬಗ್ಗೆ ಮೆಚ್ಚಿಗೆ ವ್ಯಕ್ತ ಪಡಿಸಿದರು. ಪ್ರತಿ ಸರ್ಕಾರಿ ಸಭೆಯಲ್ಲಿ ಇರುವಂತೆ ವೇದಿಕೆ ಮೇಲೆ ರಾಜಕೀಕ ಹಿತಾಸಕ್ತರು ಆಸಿನರಾಗಿದ್ದರು. 

ಆಸಕ್ತಿ ವಿಷಯವೆನಂರೆ, ಸುಮಾರು 20 ರಿಂದ 25 ಬಗೆ ಬಗೆಯ ನಾಟಿ ಮಾವಿನ ತಳಿಗಳನ್ನು ರೈತರಿಗೆ ನೋಡಲಿಕ್ಕೆ ಅವಕಾಶವಿತ್ತು. ಅದರಲ್ಲಿ ನನನ್ನು ಗಮನ ಸೆಳೆದಿದ್ದು Omlet (ಆಮ್ಲೇಟ್) ಎನ್ನುವ ದೊಡ್ಡ ಗಾತ್ರದ ಮಾವು. ಸುಮಾರು ಒಂದು ಕಿ.ಲೊ ಭಾರವಿರಬಹುದು. ದುರಾದೃಷ್ಟಕ್ಕೆ ಕ್ಯಾಮರ ನನ್ನಲ್ಲಿ ಇರಲಿಲ್ಲ. ಆದರೂ ನನ್ನ ಸೇಲ್ ಫೋನ್ ನಲ್ಲಿ ಪೋಟೊ ತೆಗೆದುಕೊಂಡೆ. ಆ ಎಲ್ಲಾ ತಳಿಯ ಮಾಹಿತಿಗಳನ್ನು ಕೇಳಬೇಕೆಂದು ಪಕ್ಕದಲ್ಲಿ ಕುಳಿತಿದ್ದ ತೋಟಗಾರಿಕಾ ಸಿಂಬ್ಬದ್ಧಿಯನ್ನು ವಿಚಾರಿಸಿದೆ. ಸರ್ ಎದೆಲ್ಲಾ ಪುಸ್ತಕದಲ್ಲಿ ಇದೆ ಓದಿಕೊಳ್ಳಿ. ಪುಸ್ತಕ ಎಲ್ಲಿವೆ ಎಂದು ಮರು ಪ್ರಶ್ನೆ ಹಾಕಿದೆ. ಆಗ ಅವರು ಸಭೆ ನಡೆಯುತ್ತಿದ್ದ ಜಾಗವನ್ನು ತೋರಿಸಿದ. ಆಗ ಸುಮ್ಮನಿರಲೇ ಬೇಕಾತು. 

ಆಗ ಸ್ವಲ್ಪ ಗಲಾಟೆ ಮಾಡಿದೆ. ಆಗ ಇನೊಬ್ಬ ಅಧಿಕಾರಿ ಬಂದರು. ಆಗ ಅವರು Omlet (ಆಮ್ಲೇಟ್) ಎನ್ನುವ ದೊಡ್ಡ ಗಾತ್ರದ ಮಾವು ಉಪ್ಪಿನಕಾಯಿಗೆ ಮಾತ್ರ ಬೆಳೆಯಬಹುದು. ಅದರ ತಿರುಳು ಬಹಳ ಹುಳಿ. ಆಗಾಗಿ ಅದನ್ನು ಹೆಚ್ಚಾಗಿ ಬೆಳೆಯುದಿಲ್ಲ  ಎಂಬ ಸಣ್ಣ ಮಾಹಿತಿ ಬಿಟ್ಟರು. ಆಗ ಮತ್ತೆ ನಾನು ಮರು ಪ್ರಶ್ನೆ ಹಾಕಿದೆ, ನೋಡಲು ಎಲ್ಲಿ ಸಿಗುತ್ತೆ. ಆಗ ಅವರು ಅದಲ್ಲಾ ಗೊತ್ತಿಲ್ಲ ಎಂದರು, ಜೋತೆಗೆ ಹೆಚ್ಚಿನ ಮಾಹಿತಿಗೆ ನಮ್ಮ ಆಫೀಸಗೆ ಬನ್ನಿ ಎಂದು ಸಲಹೆ ಇತ್ತರು.

ಇತ್ತ ನಾನು ಮನಸ್ಸಿನಲ್ಲಿ Omlet (ಆಮ್ಲೇಟ್) ಎನ್ನುವ ದೊಡ್ಡ ಗಾತ್ರದ ಮಾವು ಹಾಗೇ ಉಳಿಯುತು. ಸುಮ್ಮನೆ ನನ್ನ ಬೈಕ್ ಕಡೆಗೆ ಹೋಗಿ ಕಾಲಿಗೆ ಬುದ್ದಿ ಹೇಳಿದೆ.

No comments:

Post a Comment