Search This Blog

Thursday, May 19, 2011

ಜೇಡ ಕಡಿತಕ್ಕೆ ಮನೆ ಮದ್ದು

ವಿವಿದ ಜೇಡಗಳನ್ನು ನೋಡುರುತ್ತಿರಿ. ಕಾಡಿನಲ್ಲಿ, ಮನೆಯಲ್ಲಿ ಮತ್ತು ಕಛೇರಿಯಲ್ಲಿ ಸಹ ಜೇಡಗಳನ್ನು  ನೋಡುರುತ್ತಿರಿ. ಪಕ್ಕದಲ್ಲಿ ಕ್ಯಾಮರ ಇರುವರು ಪೋಟೊ ತೆಗೆಯುವ ಸಾಧ್ಯತೆಗಳು ಹೆಚ್ಚು. ಇಲ್ಲವಾದರೆ ಸುಮ್ಮನೆ ನಮ್ಮ ಪಾಡಿಗೆ ನಾವು ನೋಡಿಕೊಂಡು ಹೋಗುತ್ತೇವೆ. ಎದಾನೇದರು ದೊಡ್ಡದ್ದು, ಬಣ್ಣಗಳಿಂದ ನೋಡಲು ಸುಂದರವಾಗಿದ್ದರೆ, ಹೇ ಬಾರೋ ಇಲ್ಲಿ ಜೇಡ ಇದೆ ಎಂದು ಬೇರೆಯವರನ್ನ ಕರೆಯುದುಂಟು. ಒಂದು ಪಕ್ಷ ಜೇಡ ಕಚ್ಚಿದರೆ ನಮಗೆ ಹೆದರಿಕೆ ಆಗುತ್ತದೆ. ಕೆಲ ಜೇಡ ನಾಗರಹಾವುನಷ್ಟೆ ವಿಷವುಂಟು. ಆದರೆ ಬಹುತೇಕ ಜೇಡಗಳು ಕಚ್ಚುವುದಿಲ್ಲ. ಒಂದು ಪಕ್ಷ ಕಚ್ಚಿದರೆ ಈ ಕೆಳಗಿನ ಮನೆ ಮದ್ದನ್ನು ಬಳಸಬಹುದು. ಈ ಮೇಲಿನ ಚಿತ್ರದಲ್ಲಿರುವುದು ವಿಷದ ಜೇಡ. ಅದರ ಹೆಸರು black widow spider. ಆದರೆ ಜಗತ್ತಿನಲ್ಲಿ ಅತಿ ಘೋರ ವಿಷದ ಜೇಡ ಬ್ರೆಜಿಲ್ ದೇಶದಲ್ಲಿ ಇದೆ. ಅದರೆ ಹೆಸರು Brazilian Wandering Spider. ಇದು ನಾಗರಹಾವು ವಿಷದ ತರನೇ ದೇಹದ ಮೇಲೆ ಪರಿಣಾಮ ಉಂಟುಮಾಡುತ್ತದೆ. ಅಂದರೆ ಈ ವಿಷವು neuro toxic ವರ್ಗಕ್ಕೆ ಸೇರುತ್ತೆ. ಇದನ್ನು ನೀವು ಈ ಕೆಳಗಿನ ಚಿತ್ರವನ್ನು ನೋಡಬಹುದು.

ಪರಿಹಾರಗಳು: 
  • ಕಿರುಕುಸಾಲೆ ಸೊಪ್ಪಿನಿಂದ ಕಷಾಯ ಮಾಡಿಕೊಂಡು ಕುಡಿಯುದು, ನಾಲ್ಕು ದಿನಗಳವರಗೆ ಕುಡಿಯುದು. 
  • ತುಳಸಿಯನ್ನು ನೀರಿನಲ್ಲಿ ತೇದು ಕಚ್ಚಿದ ಜಾಗಕ್ಕೆ ಹಚ್ಚುವುದು
  • ಗಜ್ಜುಗದ ಪಪ್ಪನ್ನು ನಿಂಬೆರಸದಲ್ಲಿ ತೇದು ಕಡಿದ ಜಾಗಕ್ಕೆ ಹಚ್ಚುವುದು.

1 comment: