Search This Blog

Monday, May 31, 2010

ಹಾಲು ಉತ್ಪಾದನೆಯಲ್ಲಿ ಅಜೋಲ ಪಾತ್ರ

ಅಜೋಲ ನೀರಿನ ಮೇಲೆ ಬೆಳೆಯುವ ಕೆಳವರ್ಗದ ಸಸ್ಯ, ಹೆಚ್ಚಾಗಿ ನೀರಾವರಿ ಕಾಲುವೆ, ಕೆರೆ ಅಂಗಲ, ಮತ್ತು ಭತ್ತದ ಗದ್ದೆಗಳಲ್ಲಿ ಕಂಡುಬರುವ ಸಾಮಾನ್ಯ ಸಸ್ಯ. ಇದರ ಸಸ್ಯ ವೈಜ್ಗಾನಿಕ ಹೆಸರು ಅಜೋಲ ಪಿನ್ನತ (Azola pinnata) ಮತ್ತು ಇದು ಅಜೋಲೆಸಿ (Azolaceae) ಕುಟುಂಬಕ್ಕೆ ಸೇರಿದ ಕೆಳ ವರ್ಗದ ಸಸ್ಯ. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಹೇರಳವಾಗಿ ಕಂಡುಬರುವ, ಮಲೆನಾಡಿನ ಸೆರಗಿನಲ್ಲಿ ಮನೆಯ ಮೇಲೆ, ದಾರಿ ಪಕ್ಕದಲ್ಲಿ ಕಲ್ಲಿನ ಮೇಲೆ ಮಳೆಗಾಲದಲ್ಲಿ ಕಂಡು ಬರುತ್ತದೆ. ಈ ಕೆಳ ವರ್ಗದ ಸಸ್ಯದಲ್ಲಿ ಸಸಾರಜನಕ ಮತ್ತು ಪ್ರೋಟಿನ ಅಂಶ ಅಧಿಕವಾಗಿದ್ದು, ಸ್ವಲ್ಪವೆ ಸ್ವಲ್ಪ ಪಶು ಆಹಾರದ ಜೋತೆಗೆ ಮಿಶ್ರಣಮಾಡಿ ಕೊಡಬಹುದು. ಅಜೋಲ ದನ-ಕರುಗಳಿಗೆ ಒಂದು ಉತ್ತಮ ಆಹಾರ, ಮಲೆ ಅಂಗಲದಲ್ಲಿಯೂ ಸಹ ಬೆಳೆಯಬಹುದು. ಕನಕಪುರ ತಾಲ್ಲುಕು ಮರಳವಾಡಿ ಗ್ರಾಮದ ಪಕ್ಕದಲ್ಲಿ ಗ್ರೀನ್ ಪ್ರತಿಷ್ಠಾನ ವತಿಯಿಂದ ಸುಮಾರು ರೈತ ವರ್ಗ ತಮ್ಮ ತಮ್ಮ ಜಾಗದಲ್ಲಿ ಅಜೋಲವನ್ನು ಹೆಮ್ಮೆಯಿಂದ ಬೆಳೆಯುತ್ತಿದ್ದಾರೆ.

ಬೆಳೆಯುವ ವಿಧಾನ:
ಸುಮಾರು ಮೂರು ಅಡಿ ಅಗಲ, ಒಂದು ಅಡಿ ಆಳ, ಮತ್ತು ಉದ್ದ ನಮಗೆ ಅನುಕೂಲ ತಕ್ಕಂತೆ (ಬೆಳೆಯುವ ಪ್ರಮಾಣ ನೋಡಿಕೊಂಡು) ಗುಂಡಿಯನ್ನು ತೆಗೆಯಬೇಕು ಅಥವಾ ಸಿಮೆಂಟ್ ತೊಟ್ಟಿಯನ್ನು ಕಟ್ಟಿಕೊಳ್ಳಬಹುದು. ತೆಗೆದ ಗುಂಡಿ ಅಥವಾ ತೊಟ್ಟಿಗೆ ಪ್ಲಾಸ್ಟಿಕ್ ಹಾಳೆಯನ್ನು ಹಾಸಬೇಕು, ನೀರು ಕೆಳಗೆ ಹೋಗದೆ ಹಾಗೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪ್ಲಾಸ್ಟಿಕ್ ಹಾಳೆಯುನ್ನು ಸುತ್ತಲೂ ಮಣ್ಣು ಮತ್ತು

ಕಲ್ಲಿನಿಂದ ಬಿಗಿಗೊಳಿಸಬೇಕು. ಗುಂಡಿ ಅಥವಾ ತೊಟ್ಟಿಯ ಮೇಲೆ ಚಪ್ಪರವನ್ನು ಹಾಕಬೇಕು, ಇದರಿಂದ ಮಳೆ ನೀರು ಮತ್ತು ಬಿಸಿಲಿನಿಂದ ಅಜೋಲವನ್ನು ರಕ್ಷಿಸಬಹುದು. ಪ್ಲಾಸ್ಟಿಕ್ ಹಾಳೆಯನ್ನು ಹಾಕಿದ ತೊಟ್ಟಿ ಅಥವಾ ಗುಂಡಿಯ ಮೇಲೆ ಪೂರ್ತಿಯಾಗಿ ನೀರು ತುಂಬಬೇಕು ಅದರ ಜೋತೆಗೆ ಸ್ವಲ್ಪ ಸಗಣಿ (೧ ಕಿ.ಲೊ/ ೨ ಕಿ.ಲೊ) ಮತ್ತು ತಿಳಿ ಮಣ್ಣನ್ನು ನೀರಿನಲ್ಲಿ ಹಾಕಿ ಕದಡಬೇಕು ಅಥವಾ ಮಿಶ್ರಣ ಮಾಡಬೇಕು, ನಂತರ ಅಜೋಲವನ್ನು ನೀರು ಹಾಕಿದ ತೊಟ್ಟಿ ಅಥವಾ ಗುಂಡಿಯಲ್ಲಿ ಬಿಡಬೇಕು. ನೀರು ಕಡಿಮೆಯಾದಂತೆ ಮತ್ತೆ ಮತ್ತೆ ನೀರನ್ನು ಹಾಕುತ್ತಿರಬೇಕು, ನೀರು ಸತತವಾಗಿ ತೊಟ್ಟಿ ಅಥವಾ ಗುಂಡಿಯಲ್ಲಿ ಇರಬೇಕು, ಇಲ್ಲದಿದ್ದರೆ ಅಜೋಲ ಬೆಳೆಯುದಿಲ್ಲ. ಅಜೋಲ ಬಿಟ್ಟು ೨೧ ರಿಂದ ೩೦ ದಿನಗಳ ನಂತರ ಅಜೋಲವನ್ನು ತೆಗೆದು ಜಾನುವಾರುಗಳಿಗೆ ಕೊಡಬಹುದು.


ಮುನ್ನಚ್ಚರಿಕೆ ಕ್ರಮಗಳು:
೧. ಯಾವಗಲೂ ನೀರು ನಿಲ್ಲುವದರಿಂದ ಸೊಳ್ಳೆಗಳು ಸಂತತಿ ಅಭಿವೃದ್ಧಿ ಯಾಗಬಹುದು, ಸೂಕ್ತ ಕ್ರಮದೊಂದಿಗೆ ಸೊಳ್ಳೆಗಳನ್ನು ನಾಶಪಡಿಸಬೇಕು
೨. ಅಜೋಲವನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವರ್ಗಾಯಿಸುವಾಗ ನೀರಿನಲ್ಲೆ ಸಾಗಿಸಬೇಕು
೩. ಹತ್ತು ಅಡಿ ಉದ್ದ, ಮೂರು ಅಡಿ ಅಗಲ ಇರುವ ತೊಟ್ಟಿ/ಗುಂಡಿಯಿಂದ, ಪೂರ್ತಿಯಾಗಿ ಬೆಳೆದ ನಂತರ, ದಿನಲೂ ಒಂದು ಚದುರ ಅಡಿ ಜಾಗದಲ್ಲಿರುವ ಅಜೋಲವನ್ನು ತೆಗೆದು ಜಾನುವಾರುಗಳಿಗೆ ತಿನ್ನಿಸಬೇಕು.
೪. ಅತಿ ಹೆಚ್ಚಿಗೆ ಅಜೋಲವನ್ನು ತಿನ್ನಿಸಬಾರದು, ಒಂದು ಸಾಮನ್ಯ ಹಸುವಿಗೆ ಎರಡು ಬೊಗಸೆಯಷ್ಟು ಅಜೋಲವನ್ನು ಪಶು ಆಹಾರದ ಜೋತೆಗೆ ತಿನ್ನಿಸಬೇಕು

ಅನೇಕ ರೈತರು ತಮಗೆ ಆದ ಲಾಭವನ್ನು ಮುಕ್ತ ಕಂಠದಿಂದ ವ್ಯಕ್ತಪಡುಸುತ್ತಿದ್ದಾರೆ ಅದರಲ್ಲಿ, ಮರಳವಾಡಿಯ ಗ್ರಾಮ ಪಕ್ಕದಲ್ಲಿ ನಾರಾಯಣ ಸ್ವಾಮಿ ಎಂಬ ರೈತ ಈ ಅಜೋಲವನ್ನ ಬೆಳೆಸುತ್ತಿದ್ದಾನೆ. ಈ ರೈತ ಹೇಳುವ ಪ್ರಕಾರ ಅಜೋಲವನ್ನ ತನ್ನ ಹಸುವಿಗೆ ಕೊಡುವ ಮೊದಲು ಎರಡು ಲೀಟರ್ ಹಾಲು ಕೊಡುತ್ತಿತ್ತು ಆದರೆ, ಅಜೋಲವನ್ನು ಕೊಟ್ಟು ಒಂದು ತಿಂಗಳ ನಂತರ ಮೂರು ಲೀಟರ್ ಹಾಲು ಕೊಡಲು ಪ್ರಾರಂಭಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾನೆ ಮತ್ತು ಅಜೋಲವನ್ನ ಬೆಳೆಯುವದಕ್ಕೆ ಖರ್ಚು ಸಹ ಕಡಿಮೆ

2 comments:

  1. ಅಜೋಲ್ಲಾ ಒಂದು ಒಳ್ಳೆಯ ಸೂಕ್ಷ್ಮ ಪೋಷಕಾಂಶಗಳ ಆಗರ. ಆದರೆ ಇದರ ಬಗ್ಗೆ ಅತಿಯಾಗಿ ಬಣ್ಣಿಸುವ ಪದ್ದತಿ ಇತ್ತೀಚಿಗೆ ನೋಡುತ್ತಿದ್ದೇನೆ. ಅಜೋಲ್ಲದಲ್ಲಿ ಪ್ರೋಟೀನ್ ಅಂಶ ೨೬-೨೮ % ಇರುವುದೇನೋ ನಿಜ. ಆದರೆ ಈ ಮೌಲ್ಯ ನಮಗೆ ಸಿಗುವುದು ಒಣಗಿದ ಅಜೊಲ್ಲದಲ್ಲಿ ಮತ್ತು ೧ ಕೆ ಜಿ ಅಜೊಲ್ಲ ಒಣಗಿಸಿದರೆ ಅದರಲ್ಲಿ ೫೦ ಗ್ರಾಂ ಒಣ ಅಜೊಲ್ಲಾ ಸಿಗುವುದು ಅಂದರೆ ೫ ಪ್ರತಿಶತ. ಈ ೫೦ ಗ್ರಾಂ ನಲ್ಲಿ ಸುಮಾರು ೧೨ ಗ್ರಾಂ ಪ್ರೋಟೀನ್ ಸಿಗುವುದು. ಅದೇ ೫೦ ಗ್ರಾಂ ಶೇಂಗಾ ಹಿಂಡಿಯಲ್ಲಿ 43% ಅಂದರೆ ಸುಮಾರು ೨೦ ಗ್ರಾಂ ಗಿಂತ ಹೆಚ್ಚು ಪ್ರೋಟೀನ್ ಅಂಶ ದೊರಕುತ್ತದೆ. ಆದ್ದರಿಂದ ಅಜೊಲ್ಲಾ ಬಗ್ಗೆ ಮಾತಾಡುವಾಗ ಪ್ರೋಟೀನ್ ಬಗ್ಗೆ ಒತ್ತು ನೀಡದೇ ಅದರಲ್ಲಿರುವ ಸೂಕ್ಷ್ಮ ಖನಿಜಗಳ ಬಗ್ಗೆ ಹೇಳಿದರೆ ಸೂಕ್ತ ಎಂದು ನನ್ನ ಅನಿಸಿಕೆ.

    ReplyDelete
  2. Dear Naveen

    Thanks for the good feedback, my artical is gives another option for fodder and also soil fertility. % of protein is less in azola when compare with Groundnut cake, but some farmers have no access to groundnut cake, those farmers can avail these options

    Manju

    ReplyDelete