Search This Blog

Monday, May 31, 2010

ಮೀನಿನ ಟಾನಿಕ್


ಬೇಕಾಗುವ ಪದಾರ್ಥಗಳು :
ಹಸಿ ಮೀನು ಒಂದು ಕೆಜಿ ಮತ್ತು ಹುಳಿ ಬೆಲ್ಲ ಅಥವ ಕರಿಬೆಲ್ಲ ಒಂದು ಕೆಜಿ. ಪ್ಲಾಸ್ಟಿಕ್ ಪಾತ್ರೆ. ಅಥವಾ ಬಾಟಲ್
ತಯಾರಿಸುವ ವಿಧಾನ :
ಹಸಿ ಮೀನನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ ಅದಕ್ಕೆ ಪುಡಿ ಮಾಡಿದ ಬೆಲ್ಲವನ್ನು ಮಿಶ್ರ ಮಾಡಿ ಒಂದು ಬಾಟಲಿನಲ್ಲಿ ಶೇಕರಿಸಿಡಬೇಕು. ಬಾಟಲಿನ ಮುಚ್ಚಳವನ್ನು ಬಿಗಿಯಾಗಿ ಗಾಳಿ ಒಳಗೂ ಹೊರಗೂ ಹೋಗದ ಹಾಗೆ ಮುಚ್ಚಬೇಕು ಪ್ರತಿ ದಿನ ಬೆಳಿಗ್ಗೆ ಅಥವಾ ಸಂಜೆ, ಯಾವುದಾದರು ಒಂದು ಸಮಯದಲ್ಲಿ ಹಲವು ಸೆಕೆಂಡ್ಗಳ ಕಾಲ ಬಾಟಲಿ ಮುಚ್ಚಳ ತೆಗೆದು ಹಾಗೇ ಮುಚ್ಚಬೇಕು. ಒಂದು ವಾರದ ನಂತರ ಜೇನು ತುಪ್ಪವನ್ನು ಹೋಲುವ ರೀತಿಯಲ್ಲಿ ಟಾನಿಕ್ ತಯಾರಾಗುತ್ತದೆ.
ಬಳಸುವ ವಿಧಾನ :
ಒಂದು ಲೀಟರ್ ನೀರಿಗೆ ಒಂದು ಚಮಚ ಮೀನಿನ ಟಾನಿಕ್ ಸೇರಿಸಿ ಹೂವಿನ ಗಿಡಗಳು ಮತ್ತು ತರಕಾರಿ ಬೆಳೆಗಳಿಗೆ ಸಿಂಪಡಿಸುವುದು. ತರಕಾರಿ ಬೆಳೆಯಲ್ಲಿ ಒಳ್ಳೆಯ ಪರಿಣಾಮ ಕಾಣಬಹುದು. ಎಲ್ಲಾ ತರಹದ ಬೆಳೆಗಳು ಬಳಸಬಹುದು, ಟಾನಿಕನ್ನು ಹೂ ಬಿಡುವ ಸಮಯದಲ್ಲಿ ಬೆಳೆಗಳಿಗೆ ಸಿಂಪರಣೆ ಮಾಡಿದರೆ ಒಳ್ಳೆಯದು. ಇದು ಉತ್ತಮ ಪ್ರಚೋದಕ, ಬೆಳೆ ಅಥವಾ ಗಿಡ-ಮರಗಳು ಸದೃಡವಾಗಿ ಬೆಳೆಯುತ್ತೆವೆ.

No comments:

Post a Comment