Search This Blog

Monday, May 31, 2010

ಭತ್ತದ ಪೀಡೆಗಳಿಗೆ ಸಾವಯವ ಪರಿಹಾರ

“ರಾಸಾಯನಿಕ ಗೊಬ್ಬರ, ಕೀಟನಾಶಕ ಎಲ್ಲಿತನಕ - ಸಾಲ ಮಾಡಿ ಸೋತು ಸತ್ತು ಹೊಗೋ ತನಕ -ಸಾವಯವ ಗೊಬ್ಬರ ಎಲ್ಲಿ ತನಕ - ಎಲ್ಲರಿಗೂ ಶುದ್ಧ ಅನ್ನ ನೀಡೋ ತನಕ, ಅದೇ ಕೊನೆ ತನಕ”. ದುರಂತವೆಂದರೆ, ಭೂಮಿಯನ್ನು ಆಳವಾಗಿ ಉಳುಮೆ ಮಾಡಿದ್ದೆವೆ. ಭೂಮಿ ತಾಯಿಗೆ ಹಂತ-ಹಂತವಾಗಿ ವಿಷ ಕೊಡುವುದರ ಮೂಲಕ ಮಲೀನ ಮಾಡುತ್ತದ್ದೇವೆ. ಹೊಲದಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕವನ್ನು ಸಿಂಪಡಿಸಿದ್ದರಿಂದ ನಮ್ಮ ಕೋಟಾನು ಕೋಟಿ ಅಣುಜೀವಿಗಳು ಸತ್ತಿವೆ. ಭತ್ತ ಕರ್ನಾಟಕದ ಪ್ರಮುಖ ಬೆಳೆ. ನೀರಾವರಿ ಅಚ್ಚು-ಕಟ್ಟು ಪ್ರದೇಶದಲ್ಲಿ ಅತಿಯಾಗಿ ಬೆಳೆಯುತ್ತಾರೆ. ಭತ್ತಕ್ಕೆ ಕೀಟನಾಶಕದ ಬಳಕೆ ಅಧಿಕವಾಗುತ್ತಿದೆ. ಹತ್ತಿಯನ್ನು ಹೊರತು ಪಡಿಸಿದರೆ ಭತ್ತಕ್ಕೆ ಕೀಟನಾಶಕವನ್ನು ಅಧಿಕವಾಗಿ ಬಳಸುತ್ತಾರೆ. ಕೀಟನಾಶಕ ಬಳಸದೆ ಬೆಳೆಗಳಿಗೆ ಬರುವ ಪೀಡೆಗಳನ್ನು ನಿಯಂತ್ರಿಸಬಹುದು. ಕೆಲವು ಸೂತ್ರಗಳನ್ನು ರೈತರಿಂದ ಕಲಿತಿದ್ದೇನೆ. ಈ ಕೆಳಗಿನ ಸೂತ್ರಗಳು ಅನೇಕ ವರ್ಷಗಳಿಂದ ಅನ್ನದಾತರು ನೆಡಿಸಿಕೊಂಡು ಬಂದಿರುವ ಸೂತ್ರಗಳು.
ಗೊಣ್ಣೆಹುಳುವಿನ ತೊಂದರೆ ಸಾಮನ್ಯವಾಗಿ ಎಲ್ಲಾ ಭಾಗದ ರ್ಯತರು ಎದುರುಸುತ್ತಿದ್ದಾರೆ. ಮರಿ ಹುಳುಗಳು ‘ಛಿ’ ಆಕಾರದಲ್ಲಿದ್ದು. ಬೇರಿನ ಭಾಗವನ್ನು ಕಡಿದು ತಿನ್ನುವುದರಿಂದ ಪೈರುಗಳು ಒಣಗುತ್ತದೆ. ನೇರವಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ಹತೋಟಿಗೆ ನಾನಾ ತರಹದ ವಿಷವನ್ನು ಬಳಸುವುದುಟ್ಟು ಇವುಗಳ ಹತೋಟಿಗಾಗಿ ಎಕರೆಗೆ ೨೫೦-೩೦೦ ಕೆ.ಜಿ ಬೇವಿನ ಹಿಂಡಿಯನ್ನು ಮಣ್ಣಿನಲ್ಲಿ ಬೆರಸಬೇಕು. ಭೂಮಿ ಹದ ಮಾಡುವಾಗ ಹಿಂಡಿಯನ್ನು ಮಣ್ಣಿಗೆ ಸೇರಿಸಬೇಕು. ಗೊಣ್ಣೆಹುಳುವಿನ ಹತೋಟಿ ಜೋತೆಗೆ ಮಣ್ಣಿಗೆ ಸಾವಯವ ಅಂಶವನ್ನು ಸೇರಿಸದಂತಾಗುತ್ತದೆ.

ಕಾಂಡ ಕೊರೆಯುವ ಹುಳ - ಮರಿ ಹುಳು ಭತ್ತದ ಕಾಂಡ ಕೊರೆದು ತಿನ್ನುವುದರಿಂದ ಸುಳಿ ಒಣಗುವುದು. ಕೈಯಿಂದ ಒಣ ಸುಳಿಯನ್ನು ಎಳೆದರೆ ಕಿತ್ತು ಬರುತ್ತದೆ. ತೆನೆ ಬಂದ ಸಮಯದಲ್ಲಿ ಹುಳುಗಳು ತೆನೆ ಬುಡದಲ್ಲಿ ಕೊರೆದಾಗ ಕಾಳುಗಳು ಜೊಳ್ಳಾಗುತ್ತದೆ. ಹೊಲದಲ್ಲಿ ಬಿಳಿ ತೆನೆ ಕಂಡು ಬರುತ್ತದೆ. ಬಾದೆಗೊಳಗಾದ ಗಿಡಗಳೂ ಕಡಿಮೆ ಸಂಖ್ಯೆಯಲ್ಲಿರುವಾಗಲೇ ಬೇರು ಸಮೇತವಾಗಿ ಕಿತ್ತು ನಾಶಪಡಿಸಬೇಕು. ಇದರ ಸ್ವಾಭಾವಿಕ ಶತ್ರುಗಳಾದ ಜೇಡ ಮತ್ತು ಗುಲಗಂಜಿ ಹುಳುಗಳನ್ನು ರಕ್ಷಿಸಬೇಕು. ಹೆಚ್ಚಿನ ತೊಂದರೆ ಕಂಡುಬಂದರೆ ‘ಪೂಚಿಮರಂದು’ ಕಷಾಯವನ್ನು ಸಿಂಪಡಿಸಿ ಹತೋಟಿ ಮಾಡಬಹುದು.

ಗರಿ ಸುತ್ತುವ ಹುಳು - ಮರಿ ಹುಳುಗಳು ಎರಡು/ಮೂರು ಗರಿಗಳನ್ನು ಸುತ್ತಿ ಒಳಗಡೆ ಜೀವಿಸುತ್ತೇವೆ. ಒಳಗಡೆ ಇದ್ದುಕೊಂಡೆ ಗಿಡದ ಪತ್ರ ಹರಿತ್ತನ್ನು ಕೆರೆದು ತಿನ್ನುತ್ತೇವೆ. ಅಂತಹ ಗರಿಗಳು ಬೆಳ್ಳಗಾಗುತ್ತವೆ. ಗಿಡಗಳ ಬೆಳವಣಿಗೆ ಕುಂಠಿತವಾಗಿತ್ತವೆ. ಇವುಗಳ ಹತೋಟಿಗಾಗಿ ಶೇ. ೪ರ ಬೇವಿನ ಕಷಾಯ ಮಾಡಬೇಕು.

ಸಸ್ಯಹೇನು - ಸಸಿ ಹಂತದಲ್ಲಿರುವಾಗ ಗರಿ ತುದಿ ಸುತ್ತಿಕೊಳ್ಳುವುದು ಮತ್ತು ತುದಿಯ ಕಡೆಯಿಂದ ಗರಿ ಒಣಗುವುದು. ಇವುಗಳ ಹತೋಟಿಗಾಗಿ ‘ಶೇ ೪ರ ಬೇವಿನ ಬೀಜದ ಕಷಾಯ’ ಸಿಂಪರಣೆ ಮಾಡುವುದುದರಿಂದ ಇವುಗಳ ಹತೋಟಿ ಮಾಡಬಹುದು.

ಎಲೆ ಸುರುಳಿ ಹುಳುವಿನ ಹತೋಟಿ - ಮಜ್ಜಿಗೆಯಿಂದ ಎಲೆ ಸುರುಳಿ (ಟeಚಿಜಿ ಡಿoಟಟeಡಿ) ಹುಳುವಿನ ತೊಂದರೆ ಕಾಣಿಸಿದಾಗ ಮಜ್ಜಿಗೆಯನ್ನು ಗದ್ದೆಗೆ ನೀರು ಹೋಗುವ ಕಾಲುವೆಯಲ್ಲಿ ಪ್ರತಿ ಎಕರೆಗೆ ಒಂದು ಚೆಂಬಿನಂತೆ ಬೆಳಗಿನ ವೇಳೆ ಸಣ್ಣಗೆ ಬಿಡಬೇಕು. ಪೈರಿಗೆ ಬೀಳುವ ಎಲ್ಲಾ ತರಹದ ಕೀಟಗಳನ್ನು ನಿವಾರಿಸುತ್ತದೆ. ಇದಕ್ಕೆ ಪರಿಹಾರ ಸಿಗದಿದ್ದರೆ ಮುಂದಿನ ಪ್ರಯೋಗ ಮಾಡಿ. ಒಂದು ಕೆ.ಜಿ. ಕತ್ತಾಳೆಯನ್ನು ಹಿತ್ತಾಳೆ ಪಾತ್ರೆಯಲ್ಲಿ ಹತ್ತು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ನಂತರ ಬಟ್ಟೆಯಲ್ಲಿ ಸೋಸಿ. ಸೋಸಿದ ದ್ರಾವಣಕ್ಕೆ ನೂರು ಗ್ರಾಂ ಬೇವಿನ ಪುಡಿ ಹಾಕಿ ಕಲಸಿ ಸಿದ್ಧ ಮಾಡಿ. ನಂತರ ದ್ರಾವಣಕ್ಕೆ ನೀರನ್ನು ಮಿಶ್ರಣ ಮಾಡಿ ಭತ್ತಕ್ಕೆ ಸಿಂಪಡಿಸಬೇಕು. ಈ ಪೀಡೆ ನಿರ್ವಹಣೆಗೆ ಮತ್ತೋಂದು ಪರಿಹಾರವಿದೆ. ಕುದಿಯುವ ನೀರಿಗೆ ಒಂದು ಕೆ.ಜಿ. ಕತ್ತಾಳೆ ಗಿಡದ ಎಲೆಗಳನ್ನು ಹಾಕಿ ಒಂದು ದಿನ ಹಾಗೆ ಬಿಟ್ಟು ಬಿಡಿ. ಮರುದಿನ ಸೋಸಿ ಬರುವ ಮೂಲ ದ್ರಾವಣಕ್ಕೆ ಒಂದು ಅಳತೆಗೆ ಹತ್ತು ಅಳತೆಯಂತೆ ನೀರನ್ನು ಬೆರಸಿ ಸಿಂಪಡಿಸಿ.

ಕಂದು ಜಿಗಿ ಹುಳುಗಳ ಹತೋಟಿಗೆ (brown plant hopper) - ಕಣಗಲೆ (nerium indicum) ಗಿಡದ ಬೀಜಗಳನ್ನು ಒಂದು ರಾತ್ರಿ ನೀರಿನಲ್ಲಿ ನೆನಸಿ. ಮರುದಿನ ಸೋಸಿ ಸಮ ಪ್ರಮಾಣದಲ್ಲಿ ನೀರನ್ನು ಬೆರೆಸಿ ಸಿಂಪಡಿಸಬೇಕು. ಮತ್ತೋಂದು ಪದ್ಧತಿಯಂದರೆ, ಲೋಳೆಸರ ಲೋಳಿಯನ್ನು ದನದ ಗಂಜಲದೊಂದಿಗೆ ಬೆರಸಿ ಸಿಂಪಡಿಸಬೇಕು. ನಿಯಂತ್ರಿಸಿವುದಕ್ಕೆ ಈ ವಿಧಾನವನ್ನು ಬಳಸುವುದುಟ್ಟು. ಎಕ್ಕದ ಎಲೆಯನ್ನು ಭತ್ತದ ಗದ್ದೆಯಲ್ಲಿ ಅಲ್ಲಲ್ಲಿ ಹರಡುವುದು. ಕಹಿ ವಾಸನೆಯಿಂದ ಜಿಗಿ ಹುಳು ಹತ್ತೀರ ಬರುವುದಿಲ್ಲ.

ಬೆಂಕಿರೋಗ - ರೈತನ ಕನಸನ್ನು ಸುಟ್ಟು ಬಿಡುವ ಈ ರೋಗ ಶಿಲೀಂದ್ರದಿಂದ ಬರುತ್ತದೆ. ರೋಗ ಬಂದ ಮೇಲೆ ನಿಯಂತ್ರಿಸಿವುದು ಅಸಾಧ್ಯ. ಮುಂಜಾಗ್ರತೆವಾಗಿ ಹತೋಟಿಗೆ ಕ್ರಮ ತೆಗೆದುಕೊಳ್ಳಬೇಕು. ಕವರು ( ಕಾಲು, ಗೌಜ್ಜಲು, ಕುಂಭ ) ಛಿಚಿveಥಿಚಿ ಚಿಡಿboಡಿeಚಿ ಮರದ ಎರಡು ಕೆ.ಜಿ ಚಕ್ಕೆಯನ್ನು ಆಯ್ದು ಕೊಳ್ಳಿ. ಚಕ್ಕೆಯನ್ನು ಗದ್ದೆಯ ಹಾಳೆಗೆ ನೀರು ಹೋಗುವ ಜಾಗದಲ್ಲಿ ಹಾಕಬೇಕು. ಚಕ್ಕೆಯ ಔಷದ ಗುಣ ನೀರಿನ ಮೂಲಕ ಗದ್ದೆಯ ತುಂಬ ವಿಸ್ತರಿಸುವುದು. ಬೆಂಕಿರೋಗ ಸುಲಭವಾಗಿ ನಿಯಂತ್ರಿಸಬಹುದು.

ಕಾಂಡ ಕೊರೆಯುವ ಹುಳು - ಹುಳು ನೇರವಾಗಿ ಬೆಳೆಯ ಕಾಂಡವನ್ನು ಕೊರೆಯುತ್ತದೆ. ಕಾಂಡವನ್ನು ತುಂಡರಿಸಿ ನೆಲಕ್ಕೆ ಬೀಳುಸುತ್ತದೆ. ಆಡುಸೋಗೆಯನ್ನು ಭತ್ತದ ಕಾಂಡಕೊರೆತ ನಿಯಂತ್ರಣಕ್ಕೆ ಉಪಯೋಗಿಸುತ್ತಾರೆ. ಈ ಗಿಡದ ಗೆಲ್ಲುಗಳನ್ನು ಮುಂಗಾರು ಭತ್ತದ ಗದ್ದೆಗಳಲ್ಲಿ ಎಳೆದಾಡುವುದರಿಂದ ಶೇ. ೭೦%ರಷ್ಟು ನಿಯಂತ್ರಣ ಮಾಡಬಹುದು. ಈ ವಿಧಾನದಿಂದ ಹತೋಟಿಯಾಗದಿಂದಲ್ಲಿ ಸೆಣಬಿನ ಬೀಜವನ್ನು ಅಯ್ದು ಕೊಳ್ಳಿ. ಐದು ಕೆ.ಜಿ ಬೀಜಗಳನ್ನು ಹತ್ತು ಲೀಟರ್ ನೀರು ಇರುವ ಬಕೇಟ್ನಲ್ಲಿ ನೆನೆ ಹಾಕಿ. ಒಂದು ರಾತ್ರಿ ನೆನಸಬೇಕು. ದ್ರಾವಣವನ್ನು ಸೊಸಿ ಸಿಂಪರಣೆಗೆ ಬಳಸಬಹುದು. ದ್ರಾವಣದೊಂದಿಗೆ ನೀರನ್ನು ಸಮಪ್ರಮಾಣದಲ್ಲಿ ಬೆರಸಿ ಬೆಳೆಗಳ ಮೇಲೆ ಸಿಂಪಡಿಸಿ.

No comments:

Post a Comment