ರೈತಾಪಿ ಸಮಾಜವು ಅನುಭವಿಸುತ್ತಿರುವ ಸಾಮಾಜಿಕ ಸಮಸ್ಯೆಗಳಾವು? ರೈತ ಸಮುದಾಯದಲ್ಲಿ ಆಧುನಿಕ ಕೃಷಿಯ ಅವಘಡದಿಂದ ಆಂತಕ ಸೃಷ್ಟಿಯಾಗಿದೆ. ನಾಳಿನ ಜೀವನದ ಬಗ್ಗೆ ಭಯ ಪ್ರಾರಂಭವಾಗಿದೆ. ಗ್ರಾಮೀಣ ಯುವಜನರು ನಗರದತ್ತ ಮುಖ ಮಾಡಿರುವುದರಿಂದ! ಹಳ್ಳಿಗಳಲ್ಲಿ ಹೊಸತನ ನಿಂತಿದೆ. ರೈತ ಸಮುದಾಯದ ಒಳ/ಹೊರ ಮನಸ್ಸಿನ ಗೊಂದಲಗಳನ್ನು ಅರ್ಥಮಾಡಿಕೊಂಡು ಮುನ್ನೆಡೆಸುವ ನಾಯಕತ್ವ ಬೇಕಾಗಿದೆ. ಅರ್ಥಹೀನ ಕೃಷಿನೀತಿಗಳು ರೈತರನ್ನು ಮತ್ತಷ್ಟು ನಿದ್ದೆಗೇಡಿಸಿವೆ. ಕೃಷಿಯಿಂದ ಯುವಜನರು ವಿಮುಖವಾಗುತ್ತಿರುವುದು ದುರದೃಷ್ಟಕರ.... ಮತ್ತೆ ಯುವಜನರು ಕೃಷಿ ಕಡೆಗೆ ಹೆಜ್ಜೆ ಹಾಕಬೇಕಾಗಿದೆ.... ಆ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಹಾಗು ಇಲಾಖೆ ಕೆಲಸ ಮಾಡಬೇಕಾಗಿದೆ. ಕೇವಲ ತಾಂತ್ರಿಕತೆ ವರ್ಗಾವಣೆ ಮಾಡಿದರೆ ಸಾಲದು ..... ಕೃಷಿಕರೊಂದಿಗೆ ಬೆರೆತು.. ಅರೆತು.. ಮುನ್ನುಗ್ಗಿಕೊಂಡು ಕೆಲಸಮಾಡಬೇಕಾಗಿದೆ. ಕೃಷಿ ಇಲಾಖೆಯಯೊಂದಿಗೆ ನನ್ನ ಆರು ತಿಂಗಳ ಅನುಭವ ನೋಡಿದರೆ ಮತ್ತಷ್ಟು ಹೆದರಿಕೆ ಪ್ರಾರಂಭವಾಗಿದೆ................
No comments:
Post a Comment