Search This Blog

Wednesday, September 2, 2009

ಜಲ ಮಾಹಿತಿಗೆ ಜಲ ಪೋರ್ಟಲ್...



ನೀರಿನ ಸಂರಕ್ಷಣೆ, ಸದ್ಬಳಕೆ ಮತ್ತು ಸಂಬಂಧಿಸಿದ ಹಲವಾರು ವಿಷಯಗಳ ಚರ್ಚೆ, ಹೋರಾಟಗಳು, ಸಂವಾದ, ಕಾರ್ಯಗಾರ ಅಲ್ಲಲ್ಲಿ ನಡೆಯುತ್ತಿವೆ. ಲೋಕಲ್, ರಾಷ್ಟ್ರಿಯ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ನೆಡೆಯುವ ಜಲ ವಿಚಾರ ತಿಳಿದುಕೊಳ್ಳಲು ತವಕವಿದೆಯೆ? ಬೇಸರ ಬೇಡ, ಅದಕ್ಕೆಂದೆ ಬೆಂಗಳೂರು ಮೂಲದ ಆರ್ಘ್ಯಂ ಸಂಸ್ಥೆ ವಿನೂತನ ಪ್ರಯತ್ನ ಮಾಡಿದೆ. “ಜಲ ಪೋರ್ಟಲ್” ಎಂಬ ವ್ಯವಸ್ಥೆ ಅಂತರಜಾಲದಲ್ಲಿ ನೋಡಲು ಸಿಗುತ್ತದೆ. ನೀರಿನ ಬಗ್ಗೆ ನಿಮ್ಮಲ್ಲಿ ಪ್ರಶ್ನೆ ಇದೆಯೇ? ನಿಮ್ಮ ಪ್ರಶ್ನೆಯನ್ನು ಹಾಕಿ, ‘ಪ್ರಶ್ನೆ ಕೇಳಿ’ ಎಂಬ ಬಟನ್ ಒತ್ತುವ ಮೂಲಕ ನಿಮಗೆ ಉತ್ತರ ಸಿಗುತ್ತದೆ. ನಿಮ್ಮದೆಯಾದ ‘ವಾಟರ್ ಬ್ಲಾಗ್’ನ್ನು ರೂಪಿಸಿಕೊಳ್ಳಬಹುದು. ಬ್ಲಾಗ್ ಮುಖಾಂತರ ಜಲ ಸಂರಕ್ಷರನ್ನ ಫ್ರೆಂಡ್ ಮಾಡಿಕೊಳ್ಳಬಹುದು. ನೀರಿನ ಸಂಬಂಧಿಸಿದ ಫಜಲ್(ಆಟ)/ಕ್ವಿಜ್ ಆಡಬಹುದು. ಕಾವೇರಿ, ಕೃಷ್ಣ ನದಿ ಕಣಿವೆಗಳ ಮಾಹಿತಿ ನಿಮಗೆ ಬೇಕೆ, ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಸರಳ ಪರಿಕರಗಳ ಬಗ್ಗೆ ಮಾಹಿತಿ ಬೇಕೆ. ಜಲ ಸಂರಕ್ಷಣೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳ ವಿವರ ಬೇಕೆ. ಇಂತಹ ನೀರಿನ ಹಲವಾರು ವಿಷಯಗಳ ಬಗ್ಗೆ ನಿರಂತರವಾಗಿ ತಿಳಿದುಕೊಳ್ಳಬಹುದು. ಆಸಕ್ತರು www.indiawaterportal.org ವೈಬ್‌ಸೈಟ್‌ಗೆ ಸಂಪರ್ಕಿಸಿ.

No comments:

Post a Comment