Search This Blog

Wednesday, September 2, 2009

ಸೋಪ್ ಪರಿಮಳ ಪಜೀತಿ !


ಬ್ಯೂಟಿ ಕಾಪಾಡಲು ಯುವಜನತೆ ಸಾಕಷ್ಟು ಹಣ ಮತ್ತು ಸಮಯವನ್ನು ತೆಗೆದಿಡುತ್ತಾರೆ. ಮಾರ್ಕೆಟ್ನಲ್ಲಿ ಸಿಗುವ ಎಲ್ಲಾ ತರಹದ ಬ್ಯೂಟಿ ಕ್ರೀಮ್‌ಗಳು, ಪೌಡರ್, ಸೋಪ್, ಹೇರ್‌ಆಯಿಲ್ ಇತ್ಯಾದಿ ಖರೀದಿ ಮಾಡುವುದರಲ್ಲಿ ನಮ್ಮ ಯುವಜನತೆ ಯಾವಗಲೂ ಮುಂದೆ. ಪೋಷಕರು ಕೊಟ್ಟ ಸ್ವಲ್ಪ ಕಾಸಲ್ಲೆ ಬ್ಯೂಟಿ ಪಾರ್ಲರ್‌ಗೆ ಹೋಗಿ ಮತ್ತಷ್ಟು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳುತ್ತಾರೆ. ಬ್ಯೂಟಿಗೆ ಬಳಸುವ ಸಾಮಗ್ರಿಗಳಲ್ಲಿ ಯಾವ ಅಂಶವಿದೆ, ಯಾವ ಅಂಶವನ್ನು ನೋಡಿ ಖರೀದಿಸಬೇಕು ಎಂಬುವ ಮಾಹಿತಿ ಮಾತ್ರ ಇಲ್ಲ. ಅಂತಹ ಬ್ಯೂಟಿಗೆ ಬಳಸುವ ಸಾಮಗ್ರಿಗಳಲ್ಲಿ ಸಾಬೂನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. ಸೋಪ ಖರೀದಿಸುವಾಗ ಅದರ ಪರಿಮಳ, ಸುವಾಸನೆ ಮುಖ್ಯವಲ್ಲ, ಅದರಂತೆ ಮಾರ್ಕೆಟ್ ಮತ್ತು ಜಾಹಿರಾತಿನಲ್ಲಿ ಸುವಾಸನೆಗೆ ಹೆಚ್ಚಿನ ಮಹತ್ವ ಕೊಟ್ಟಿರುವದರಿಂದ ಎಲ್ಲರೂ ಅದನ್ನೆ ಮಾನದಂಡವಾಗಿ ಉಪಯೋಗಿಸುತ್ತಾರೆ. ಯಾವದೆ ಶಾಪ್‌ಗೆ ಹೋದರೂ ಬಗೆ-ಬಗೆಯ ಪರಿಮಳಯುಕ್ತ ಸಾಬೂನ್ ಲಭ್ಯ. ಸಾಬೂನಿಗೆ ಸುವಾಸನೆ ಮುಖ್ಯವಲ್ಲ ಬದಲಾಗಿ ಸೋಪ್‌ನಲ್ಲಿರುವ ಖಿಈಒ (ಟೋಟಲ್ ಪ್ಯಾಟಿ ಮ್ಯಾಟರ್) ಬಹು ಮುಖ್ಯ. ನಮ್ಮ ಚರ್ಮವನ್ನು ಶುಷ್ಕವಾಗದಂತೆ, ಬಿರಿಯದಂತೆ, ಅಪಾಯಕಾರಿ ಅಂಶವನ್ನು ತಡೆಯುವುದೆ ಈ ಖಿಈಒ, ಬದಲಾಗಿ ಸೋಪ್‌ನ ಪರಿಮಳವಲ್ಲ. ಃIS (ಬ್ಯೋರೊ ಆಫ್ ಇಂಡಿಯನ್ ಸ್ಟಾಂಡರ್ಡ) ಪ್ರಕಾರ ಯಾವದೇ ಬಾತೀಗ್ ಸೋಪ್‌ಲ್ಲಿ ಶೇ ೭೬% ಇರಲೇಬೇಕು. ಖಿಈಒ ಕಡಿಮೆ ಇದ್ದ ಪಕ್ಷದಲ್ಲಿ ಸೋಪ್‌ನ್ನು ಖರೀದಿಸಬೇಡಿ.

No comments:

Post a Comment