Search This Blog

Wednesday, November 9, 2011

ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳುವ ಯುವಜನರ ಸವಾಲು

ಈಗ ಸರ್ಕಾರಿ ನೌಕರಿ ಪಡೆಯಲು ಸರ್ಟಿಫಿಕೇಟುಗಳು ಮಾತ್ರವೇ ಸಾಕಾಗುತ್ತಿಲ್ಲ. ಲಕ್ಷ ಲಕ್ಷಗಳಲ್ಲಿ ಹಣವೂ ಬೇಕು. ಈ ನಡುವೆ ನಗರ ಬೆಳೆಯುತ್ತಿದ್ದಂತೆ ಕೆಲವು ಜನ ಅನೇಕ ರೀತಿಯ ಸೇವೆಗಳನ್ನು ಒದಗಿಸುತ್ತಾ ತಂತಮ್ಮ ಬದುಕಿನ ದಾರಿಗಳನ್ನು ಕಂಡುಕೊಳ್ಳವುದನ್ನು ನೋಡುತ್ತಿದ್ದೆೀವೆ. ಹಸಿವು ಅಂತಹ ಹುಡುಕಾಟವನ್ನು, ಕ್ರಿಯಾಶೀಲತೆಯನ್ನು ಸಾಧ್ಯವಾಗಿಸುತ್ತದೆ. ಹಾಗಾಗಿ ನಗರೀಕರಣ ಮತ್ತು ಸಮಾನಾಂತರ ಬೆಳವಣಿಗೆಗಳ ಸಂದರ್ಭದೊಳಗಿಂದಲೇ ಗೌರವಯುತ ಜೀವನ ನಿರ್ವಹಣೆಯ ಸಾಧ್ಯತೆಗಳು ಏನೇನಿವೆ ಮತ್ತು ಜೀವನ ನಿರ್ವಹಣೆ ಮತ್ತು ಸಾಮಾಜಿಕ ಬಲಾವಣೆಯ ಆಶಯಗಳೆರಡನ್ನೂ ಪೂರೈಸಬಲ್ಲ ಹೊಸ ಬಗೆಯ ಉದ್ಯೋಗಗಳನ್ನು ಹುಡುಕುವ ಯುವಜನರಿಗೆ ಬಲ ನೀಡಬೇಕಿದೆ. ಕೃಷಿಯಲ್ಲಿ ಜೀವನ ನಿರ್ವಹಣೆಯ ಹೊಸ ಸಾಧ್ಯತೆಗಳು ಗೋಚರಿಸಲಿವೆ. ಒಂದು ಕಡೆಗೆ ಪರಿಸರ ಮಾಲಿನ್ಯ ಮುಖ್ಯವಾಗಿ ನಗರ ವಾಸಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ರಾಸಾಯನಿಕ ಕೃಷಿಯಿಂದ ಆಹಾರ ಮಾಲಿನ್ಯವಾಗಿರುವುದು ಈಗ ಎಲ್ಲರಿಗೂ ತಿಳಿಯುತ್ತಿದೆ. ಸಾವಯವ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ಬೆಳೆದರೆ ಅದಕ್ಕೆ ಒಳ್ಳೆಯ ಮಾರುಕಟ್ಟೆ ಇದೆ. ಜನ ಅದನ್ನು  ಬೆಲೆ ಕೊಟ್ಟು ಖರೀದಿಸಲೂ ತಯಾರಿದ್ದಾರೆ. 

ಮುಂದೆ ಓದಿ...........

http://www.prajavani.net/web/include/story.php?news=2446&section=30&menuid=14

ಹಸಿರುನಾಥ

No comments:

Post a Comment