ಆಕರ್ಷಣೆಗಳು
ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಸ್ಥಳಗಳಲ್ಲಿ ಹಂಪೆ ಮತ್ತು ಅಲ್ಲಿರುವ ವಿಜಯನಗರ ಸಾಮ್ರಾಜ್ಯದ ಅವಶೇಷಗಳು ಮುಖ್ಯವಾದವು. ಬಳ್ಳಾರಿ ಜಿಲ್ಲೆಯ ಇನ್ನೊಂದು ಪ್ರಮುಖ ಪಟ್ಟಣ ಎಂದರೆ ಹೊಸಪೇಟೆ - ಇಲ್ಲಿರುವ ತುಂಗಭದ್ರಾ ಅಣೆಕಟ್ಟು ಕೃಷಿಗೆ ನೀರನ್ನು ಒದಗಿಸುತ್ತದೆ. ಮ್ಯೆಲಾರದ ಮ್ಯೆಲಾರಲೀಂಗೆಶ್ವರ ದೇವಾಸ್ಥಾನ ಕಾಣಿಕೆಗೆ ಬಹು ಪ್ರಸಿದ್ಧಿ. ಸರಿ ಸುಮಾರು ಏಳು ಕೋಟಿ ಜನ ಸೇರುವ ದೊಡ್ಡ ಜಾತ್ರೆ ನಡೆಯುತ್ತೆ. ಪಕ್ಕದ ಹೊಳಲು ಗ್ರಾಮದಲ್ಲಿ ಅನಂತಸಯನ ದೇವರ ವ್ಯೆಭವ ಅಮೂಲ್ಯ.
ಚರಿತ್ರೆ
ಚಾರಿತ್ರಿಕವಾಗಿ, ಬಳ್ಳಾರಿ ಜಿಲ್ಲೆ ಪ್ರಾಮುಖ್ಯತೆಗೆ ಬಂದದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಇದಕ್ಕೆ ಮೊದಲು ಈ ಪ್ರದೇಶ ಶಾತವಾಹನ, ಕಲ್ಯಾಣಿ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಬಂದಿತು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ ೧೯೫೩ ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು.
ಭೌಗೋಳಿಕ
ಕರ್ನಾಟಕದ ಪೂರ್ವದ ಗಡಿಯಲ್ಲಿರುವ ಬಳ್ಳಾರಿ ಜಿಲ್ಲೆಯ ಉತ್ತರಕ್ಕೆ ರಾಯಚೂರು ಮತ್ತು ಕೊಪ್ಪಳ ಪಶ್ಚಿಮಕ್ಕೆ ಹಾವೇರಿ ಮತ್ತು ಗದಗ್, ದಕ್ಷಿಣಕ್ಕೆ ದಾವಣಗೆರೆ ಮತ್ತು ಚಿತ್ರದುಗ ಮತ್ತು ಪೂರ್ವಕ್ಕೆ ಆಂಧ್ರ ಪ್ರದೇಶದ ಅನಂತಪುರ ಹಾಗೂ ಕರ್ನೂಲು ಜಿಲ್ಲೆಗಳಿವೆ. ಈ ಜಿಲ್ಲೆಯ ವಿಸ್ತೀರ್ಣ 8447 ಚ.ಕಿಮೀ ಮತ್ತು ವಾರ್ಷಿಕ ಮಳೆ ೬೩.೯ ಸೆಮೀ. ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮತ್ತು ಸೀಸದ ಗಣಿಗಳು ಸಾಕಷ್ಟಿವೆ.
ಕೃಷಿ
ಕೃಷಿ ಬಳ್ಳಾರಿ ಜಿಲ್ಲೆಯ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ತುಂಗಭದ್ರಾ ನದಿ ಮತ್ತು ಹೊಸಪೇಟೆಯಲ್ಲಿನ ತುಂಗಭದ್ರಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಹತ್ತಿ, ಜೋಳ, ನೆಲಗಡಲೆ, ಭತ್ತ, ಸೂರ್ಯಕಾಂತಿ. ಹಲವಾರಿ ಬೀಜ ಕಂಪನಿಗಳು ಬೇರೆ-ಬೇರೆ ಬೆಳೆಗಳನ್ನು ನೋಡಬಹುದು.
ತಾಲೂಕುಗಳು
ಹೂವಿನ ಹಡಗಲಿ ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಬಳ್ಳಾರಿ ಇಂದ ಸುಮಾರು ೧೩೫ ಕಿ.ಮೀ. ದೂರದಲ್ಲಿದೆ. ಇದು ಜಿಲ್ಲೆಯ ಕೊನೆಯ ತಾಲುಕು. ಈ ಊರು ಮಲ್ಲಿಗೆ ಹೂವಿಗೆ ಪ್ರಸಿದ್ಧ. ಹಿಂದೆ ವಿಜಯನಗರ ರಾಜರ ಕಾಲದಲ್ಲಿ ಮಲ್ಲಿಗೆ ಹೂವುಗಳನ್ನು ದೋಣಿಯಲ್ಲಿ ತುಂಬಿ ವಿಜಯನಗರದ ಶ್ರೀ ವಿರುಪಾಕ್ಷ ದೇವರ ಪೂಜೆಗೆ ಪ್ರತಿನಿತ್ಯ ಈ ಊರಿನಿಂದ ತುಂಗಭದ್ರಾ ನದಿ ಮೂಲಕ ಕಳಿಸಿಕೊಡಲಾಗುತಿತ್ತು. ಈ "ಹೂವಿನ ಹಡಗು" ಇಂದ "ಹೂವಿನ ಹಡಗಲಿ" ಎಂಬ ಹೆಸರು ಬಂತು ಎನ್ನುವ ಮಾತು ಇದೆ. ಈ ತಾಲುಕಿನಲ್ಲಿ ಜಿ.ಬಿ.ಆರ್ ಸಕಾರಿ ಕಾಲೇಜು ದೊಡ್ಡ ಕಾಲೇಜು. ಅನೇಕ ಬಡವರ ಪಾಲಿಗೆ ವರದಾನ.
ಹಗರಿಬೊಮ್ಮನಹಳ್ಳಿ ಬಳ್ಳಾರಿ ಜಿಲ್ಲೆಯ ಒಂದು ತಾಲುಕು ಕೇಂದ್ರ. ಈ ತಾಲೂಕು ಎಣ್ಣೆ ಬೆಳೆಗಳ ಹಾಗು ಎಣ್ಣೆ ಉತ್ಪಾದನೆಯ ಕೇಂದ್ರವಾಗಿದೆ. ಈ ತಾಲುಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಶ್ರೀ ಭಂದೆರಂಗನಾಥ ಸ್ವಾಮಿ ಗುಡ್ಡ ಗಮನೀಯ. ಇದರ ಸುತ್ತಲು ತುಂಗಭದ್ರ ನದಿ ಇದೆ. ಹಗರಿಬೊಮ್ಮನಹಳ್ಳಿ ಹತ್ತಿರದಲ್ಲಿ ಮಾಲವಿ ಡ್ಯಾಮ್ ಇದೆ, ನೀರಾವರಿ ಸವಲತ್ತು ಇಲ್ಲದ ರೈತರು ಇದರ ನೀರಿನ ಸದುಪಯೊಗವನ್ನು ಪಡೆಯುವಲ್ಲಿ ಯಶಶ್ವಿಯಾಗಿದ್ದಾರೆ.
ಶಿರಗುಪ್ಪ ಕನಾಟಕದ ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಶಿರಗುಪ್ಪದ ಸಮುದ್ರ ಮಟ್ಟಕ್ಕಿಂತ ಮೇಲಿರುವ ಸರಾಸರಿ ಎತ್ತರ ಸುಮಾರು ೩೭೩ ಮೀಟರ್ ಆಗಿದೆ. ಇಲ್ಲಿ ತುಂಗಭದ್ರ ನದಿ ಹರಿಯುತ್ತದೆ. ಈ ನದಿ ಜನರ ಜೀವಾಳ ಆಗಿದೆ.ಶಿರುಗುಪ್ಫ ಬಳ್ಳಾರಿ ಜಿಲ್ಲೆಯ ಭತ್ತದ ಖಣಜವಾಗಿದೆ.
ಹೊಸಪೇಟೆ ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಹೊಸಪೇಟೆಯು ತುಂಗಭದ್ರ ನದಿ ತೀರದಲ್ಲಿದ್ದು, ಜಗತ್ ಪ್ರಸಿದ್ಢ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯಿಂದ ಕೇವಲ ೧೩ ಕಿ.ಮೀ ದೊರದಲ್ಲಿದೆ. 'ಹಂಪೆ' ಈ ಸ್ಥಳ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ತುಂಗಭದ್ರ ನದಿಗೆ ೨೦ ನೇ ಶತಮಾನದಲ್ಲಿ ತುಂಗಭದ್ರ ಅಣೆಕಟ್ಟು ಕಟ್ಟಲಾಗಿದೆ. ಬೊಮ್ಮಘಟ್ಟ ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧ , ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲ ದ ದಶಮಿಯಂದು ರತೋತ್ಸವ ಇರುತ್ತದೆ.