Search This Blog

Saturday, May 28, 2011

ಬದನೆ ತಳಿ ಕಳ್ಳರಿದ್ದಾರೆ ಎಚ್ಚರಿಕೆ!

ಬಿಟಿ ಬದನೆ ಬಹಿಷ್ಕಾರಕ್ಕೆ ಬಲ ಬಂದಿದೆ. ಆದರೆ ಕಂಪನಿ ಕಪಿಗಳು ಮತ್ತು ರೈತ ವೀರೋಧಿ ಅಧಿಕಾರಿಗಳು ಬಿಟಿ ಬದನೆಗೆ ಹಸಿರು ನಿಶಾನೆ ತೋರುಸುತ್ತಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದವರು ನಮ್ಮ ರಾಜ್ಯದಲ್ಲಿ ಬಿಟಿ ಬದನೆಗೆ ಕಂಪನಿ ಜೋತೆ ಒಂಪ್ಪದ ಮಾಡಿಕೊಂಡಿದ್ದಾರೆ. ಬಿಟಿ ಬದನೆಯ ಎಲ್ಲಾ ಕೆಲಸಗಳನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದವರು ಕಂಪನಿಯ ವಕ್ತಾರರಂತೆ ಮಾಡಿಕೊಡುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದವರು ನಮ್ಮ ರಾಜ್ಯದ ಆರು ನಾಟಿ ತಳಿಗಳನ್ನು ಅನುಮತಿ ಇಲ್ಲದೆ ತಳಿ ಬದಲಾವಣೆಗಾಗಿ ಬಳಸಿಕೊಂಡಿರುವುದು. ಮಟ್ಟುಗುಲ್ಲಾ, ರಬಕವಿ ಲೋಕಲ್, ಗೋವನ್, ಮಾಲಾಪುರ ಲೋಕಲ್, ಮಂಜಾರಿ ಲೋಕಲ್ ಹಾಗು ಕುಡಚಿ ಲೋಕಲ್ ಧಾರವಾಡ ಕೃಷಿ ವಿಶ್ವವಿದ್ಯಾಲಯದವರು ಬಳಸಿಕೊಂಡ ನಾಟಿ ಬದನೆ ತಳಿಗಳು. 

ಜೀವ ವೈವಿವಿಧ್ಯತೆ ಕಾಯ್ದೆ-2002 ಪ್ರಕಾರ ರಾಷ್ಟ್ರೀಯ ಜೀವವೈವಿಧ್ಯತ ಮಂಡಳಿ ಅಥವಾ ರಾಜ್ಯ ಜೀವವೈವಿಧ್ಯತ ಮಂಡಳಿ ಅಥವಾ ಜೀವವೈವಿಧ್ಯತ ನಿರ್ವಹಣಾ ಕಮಿಟಿ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ. ಜೀವ ವೈವಿವಿಧ್ಯತೆ ಕಾಯ್ದೆ-2002, ಭಾಗ 61ರ ಪ್ರಕಾರ ನಾಟಿ ತಳಿಗಳನ್ನು ಅನುಮತಿ ಇಲ್ಲದೆ ಬಳಸುವುದು ಅಫರಾದ. ಆದರೆ ಧಾರವಾಡ ಕೃಷಿ ವಿಶ್ವವಿದ್ಯಾಲಯದವರು ಯಾರು ಅನುಮತಿ ಇಲ್ಲದೆ ಆರು ನಾಟಿ ತಳಿಗಳನ್ನು ಬಳಸಿ ಮಾನ್ಸೊಂಟೊ ಬೀಜ ಕಂಪನಿ ಲಾಭಕ್ಕೆ ಮಾರಿಕೊಂಡಿದ್ದಾರೆ. ಇದನ್ನು ಕೇಳುವ ಅಧಿಕಾರ ನಮಗಿಲ್ಲವೇ. ನಮ್ಮ ತಳಿಯನ್ನು ಕದ್ದು ಕಂಪನಿ ಲಾಭಕ್ಕೆ ಮಾರುವುದು ಎಷ್ಟು ಸರಿ. ಇವತ್ತು ನಾಟಿ ಬದನೆ ತಳಿ ಕದ್ದಿದ್ದಾರೆ. ನಾಳೆ ನಮ್ಮ ಬೀಜಕ್ಕೊ ಕೈ ಹಾಕಬಹುದು. ತಳಿ ಕದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯದವರಿಗೆ ಶಿಕ್ಷೆಯಾಗಬೇಕು ಹಾಗು ನಮ್ಮ ತಳಿ ಬಳಸಿಕೊಂಡುದ್ದಕ್ಕೆ ಮಾನ್ಸೊಂಟೊ ಬೀಜ ಕಂಪನಿಯ ವ್ಯವಹಾರವನ್ನು ಭಾರತದಲ್ಲಿ ನೀಷೇದ ಮಾಡಬೇಕು.

No comments:

Post a Comment