Search This Blog

Wednesday, May 11, 2011

ಎಲ್ಲರೂ ನೋಡಿರುವ ವಿಶೇಷ ಕೀಟ.....

ಕೀಟಗಳ ಬದುಕಿನ ದಾರಿಯೇ ವಿಬಿನ್ನ. ಬಣ್ಣ-ಬಣ್ಣದ ಚಿಟ್ಟೆಗಳ ಹಾರಾಟವನ್ನು ನೋಡಿ ಆನಂದ ಪಟ್ಟರೆ, ಆದ್ರೆ ಕೆಲವರು ಕೆಲ ಕೀಟಗಳನ್ನು ನೋಡಿ ಭಯ ಪಡುತ್ತಾರೆ. ಕೀಟಗಳ ಬಗ್ಗೆ ಕೃಷಿಕರಿಗೆ ಸಿಹಿ-ಕಹಿ ಮಿಶ್ರಣ. ಮನೆಯಲ್ಲಿರುವ ಕರ್ಣಕೀಟಗಳ ಬಗ್ಗೆ ತಿಳಿಯೋಣ. ಕರ್ಣಕೀಟವು ರಾತ್ರಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಹಗಲು ನಿದ್ರೆಗೆ ಶರಣಾಗುತ್ತದೆ. ಹೊಟ್ಟೆಯ ಹಿಂಭಾಗದಲ್ಲಿ ಇಕ್ಕುಳದಂತಯ ಎರಡು ಕೊಂಡಿಯೊಂದಿದೆ. ಹಿಂಭಾಗದ ರಕ್ಕೆಗಳು ಮುಂಭಾಗದ ರಕ್ಕೆಗಳಿತ್ತ ದೊಡ್ಡ್ವವು. ಈ ಕೀಟಗಳ ರಕ್ಕೆಗಳ ಆಕಾರ ನಮ್ಮ ಕಿವಿಗಳಿರುವಂತೆ ಇವೆ. ಆದ್ದರಿಂದ ಇವುಗಳನ್ನು ಕರ್ಣಕೀಟಗಳೆಂದು ಕರೆಯಲಾಗಿದೆ.  ಹಿಂಭಾಗದಲ್ಲಿರುವ ಕೊಂಡಿಯ ಸಹಾಯದಿಂದ ರಕ್ಕೆಗಳನ್ನು ಮಡಿಚಲು ಮತ್ತು ಬಿಚ್ಚಳು ಬಳಸಿಕೊಳ್ಳುತ್ತದೆ. ಇವುಗಳನ್ನು ಕೆಣಕಿದಾಗ ಹಿಂಭಾಗದಲ್ಲಿರುವ ಕೊಂಡಿಯನ್ನು ಚಲಿಸಿ ಕೋಪವನ್ನು ವ್ಯಕ್ತಪಡಿಸುತ್ತದೆ. ರಕ್ಷಣೆಗೊಸ್ಕರ ಈ ಇಕ್ಕುಳದಂತಹ ಕೊಂಡಿಯನ್ನು ಬಳಸುತ್ತದೆ.

ಈ ಕೀಟದ ವಿಶೇಷತೆ, ನೆಲದಲ್ಲಿಟ್ಟ ಮೊಟ್ಟೆಗಳಿಗೆ ತಾಯಿ ಕೀಟವೇ ರಕ್ಷಣೆ ಒದಗಿಸುತ್ತದೆ. ಮರಿಗಳ ಕಾವಲನ್ನು ತಾಯಿ ಕೀಟವೇ ನಿರ್ವಹಿಸುತ್ತದೆ. ಕೀಟ ವರ್ಗದಲ್ಲಿ ಮೊಟ್ಟೆ ಮತ್ತು ಮರಿಗಳನ್ನು ರಕ್ಶಣೆ ನೋಡಿಕೊಳ್ಳುವ ಜವಾಬ್ದಾರಿ ಇದೊಂದೆ ಕೀಟ ಮಾತ್ರ. 

ಕೀಟಗಳ ವರ್ಗೀಕರಣ.........


Kingdom:
Phylum:
Subphylum:
Class:
Order:
Genus:
Species:
Dermaptera
Forficula
auricularia

No comments:

Post a Comment