ಹೆಜ್ಜೇನು (Rock bee) ದಾಳಿ ಮಾರಣಾಂತಿಕ. ಕಚ್ಚಿಸಿಕೊಂಡವರ ವೀರೋಧಿಗಳಿಗೆ ಮಾತನಾಡುವ ವಸ್ತು ಆಗಬಹುದು. ಹೆಜ್ಜೇನು ದಾಳಿ ಆಕಸ್ಮಿಕ ಆದರೆ ಭಯಾನಕ. ಭಯ ಪಡುವ ಅವಶ್ಯಕತೆ ಬೇಡ. ಎಲ್ಲದಕ್ಕೂ ಆರ್ಯುವೇದದಲ್ಲಿ ಉಪಾಯಗಳಿವೆ. ತುಂಬಾ ಸರಳ ಉಪಾಯಗಳನ್ನು ಕೊಡಲಾಗಿದೆ. ಹತ್ತಕ್ಕಿಂತ ಹೆಚ್ಚು ಹೆಜ್ಜೇನು ಕಚ್ಚಿದರೆ ವ್ಯೆದ್ಯರನ್ನು ಬೇಟಿಯಾಗಬೇಕು. ಇಲ್ಲವಾದರೆ ಮನೆಮದ್ದುನಿಂದ ವಾಸಿಮಾಡಿಕೊಳ್ಳಬಹುದು.
ಲಕ್ಷಣಗಳು (Symtoms)
- ದೇಹದಲ್ಲಿ ಉರಿ ಮತ್ತು ಸಂಕಟ
- ಕಚ್ಚಿದ ಭಾಗ ಉದಿಕೊಳ್ಳುತ್ತದೆ
- ತಲೆಸುತ್ತು ಮತ್ತು ದೇಹ ನಿಶ್ಯಕ್ತಿ ಹೊಂದುತ್ತದೆ
ಹೆಜ್ಜೇನು ಕಚ್ಚಿದಾಗ ಎಚ್ಚರಿಕೆಯಿಂದ ಇರಬೇಕಾದ ಮಾರ್ಗಗಳು
- ಕಚ್ಚಿದ ಜಾಗದಿಂದ ಎಲ್ಲಾ ಹುಳುಗಳ ಮುಳ್ಳನ್ನು ತೆಗೆಯಬೇಕು.
- ತಕ್ಷಣ ಶ್ವಚ್ಚವಾದ ತಣ್ಣೀರುನಿಂದ ಕಚ್ಚಿದ ಭಾಗವನ್ನು ತೊಳೆಯಬೇಕು
- ಚೆನ್ನಾಗಿ ನೀರು ಕುಡಿಸಬೇಕು, ಇದರ ಜೋತೆಗೆ ನಿಂಬೆಹಣ್ಣಿನ ಪಾನಕವನ್ನು ಕುಡಿಸಬೇಕು
- ನಂತರ ವ್ಯೆದ್ಯರನ್ನು ಬೇಟಿಯಾಗಬೇಕು
ಪ್ರಥಮ ಚಿಕಿತ್ಸಾ ಕ್ರಮಗಳು
- ಹಸಿ ಈರುಳ್ಳಿಯ ಜೋತೆಗೆ ಬೆಲ್ಲವನ್ನು ಮಿಶ್ರಣಮಾಡಿ ತಿನ್ನಬೇಕು
- ತುಂಬೆಯ (Leucas aspera) ೧೦ ರಿಂದ ೧೫ ಎಲೆಗಳನ್ನು ಜೇನುತುಪ್ಪದಲ್ಲಿ ತೇದು ಕಚ್ಚಿದ ಜಾಗಕ್ಕೆ ಹಚ್ಚಬೇಕು
- ಈಶ್ವರಿ ಬೇರನ್ನು (Aristolochia indica) ನಿಂಬೆರಸದಲ್ಲಿ ತೇದು ಕಚ್ಚಿದ ಜಾಗಕ್ಕೆ ಹಚ್ಚಬೇಕು
- ಖರ್ಜೂರದ (DatePalm) ಬೀಜವನ್ನು ನೀರಿನಲ್ಲಿ ತೇದು ಹಚ್ಚಬೇಕು
- ಒಂದು ಹಿಡಿ ಬೇವಿನಸೊಪ್ಪು (Neem) ಮ್ಮತ್ತು ೫೦ ಗ್ರಾಂ ಕಾಡು ಜೀರಿಗೆಯನ್ನು (Black cumin) ಚೆನ್ನಾಗಿ ಅರೆದು ಕಡಿದ ಜಾಗಕ್ಕೆ ಹಚ್ಚಬೇಕು
ಯಾವುದೇ ವಿಷಜಂತುಗಳಿಗೆ ಆರ್ಯುವೇದದಲ್ಲಿ ಮದ್ದುಂಟು. ಹೆದುರುವ ಅವಶ್ಯಕತೆ ಬೇಡ. ಆದರೆ ಯಾವುದೇ ಕಾರಣಕ್ಕೂ ಅದರ ತಂಟೆಗೆ ಹೋಗಬಾರದು. ಕಲ್ಲು ಎಸೆಯುವುದು, ಹತ್ತೀರ ಹೋಗಿ ಪೋಟೊ ತೆಗೆಯುದು, ಹತ್ತೀರ ಹೋಗಿ ತುಂಬಾ ಗಲಾಟೆ ಮಾಡಬಾರದು.ಹೆಜ್ಜೇನು ಗೂಡಿನ ಹತ್ತೀರ ದ್ವನಿ ವರ್ಧಕಗಳನ್ನು ಬಳಸಬಾರದು. ಅದೇ ಹೆಜ್ಜೇನುನಿಂದ ಪರಿಸಕ್ಕೆ ಮತ್ತು ಕೃಷಿಗೆ ತುಂಬಾ ಲಾಭವಿದೆ.
No comments:
Post a Comment