ವಾಯುಮಂಡಲದಲ್ಲಿನ ಅನಿಲಗಳಿಂದಾಗುವ ಅವಗೆಂಪು ವಿಕಿರಣಗಳ ಹೀರುವಿಕೆ ಹಾಗೂ ಹೊರಸೂಸುವಿಕೆಯು ಗ್ರಹವೊಂದರ ಕೆಳಮಟ್ಟದ ವಾಯುಮಂಡಲ ಹಾಗೂ ಮೇಲ್ಮೈಯ ಉಷ್ಣತೆಯನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಹಸಿರುಮನೆ ಪರಿಣಾಮವೆನ್ನುತ್ತಾರೆ. ಈ ವಿಚಾರವನ್ನು 1824ರಲ್ಲಿ ಮೊದಲಿಗೆ ಜೋಸೆಫ್ ಫ್ಯೂರಿಯರ್ ಪತ್ತೆಹಚ್ಚಿದರು. ಹಸಿರುಮನೆ ಪರಿಣಾಮದ ಅಸ್ತಿತ್ವವನ್ನು ಇತ್ತೀಚಿನ ತಾಪಮಾನ ಹೆಚ್ಚಳಕ್ಕೆ ಮಾನವ ಚಟುವಟಿಕೆ ಕಾರಣವಲ್ಲ ಎಂದು ವಾದಿಸುವವರೂ ಸಹಾ ಅಲ್ಲಗಳೆಯುವುದಿಲ್ಲ. ಆದರೆ ಪ್ರಮುಖ ಪ್ರಶ್ನೆಯೆಂದರೆ ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಸಂಗ್ರಹವನ್ನು ಮಾನವ ಚಟುವಟಿಕೆಯು ಹೆಚ್ಚಿಸಿದಾಗ ಹಸಿರುಮನೆ ಪರಿಣಾಮದ ಪ್ರಭಾವ ಹೆಚ್ಚಾಗುವುದು ಹೇಗೆ ಎಂಬುದು.
ನೈಸರ್ಗಿಕವಾಗಿ ಉತ್ಪನ್ನವಾಗುವ ಹಸಿರುಮನೆ ಅನಿಲಗಳು ಸುಮಾರು 33 °C. ಪ್ರಮುಖ ಹಸಿರುಮನೆ ಅನಿಲಗಳೆಂದರೆ 36ರಿಂದ 70 ಪ್ರತಿಶತ ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ನೀರಿನ ಆವಿ, 9ರಿಂದ 26 ಪ್ರತಿಶತ ಕಾರಣವಾಗುವ CO2, 4ರಿಂದ 9 ಪ್ರತಿಶತ ಕಾರಣವಾಗುವ CH4 ಮತ್ತು 3ರಿಂದ 7 ಪ್ರತಿಶತ ಕಾರಣವಾಗುವ O3. ಮೋಡಗಳು ಸಹಾ ವಿಕಿರಣ ಅಸಮತೋಲನಕ್ಕೆ ಕಾರಣವಾಗುವುದಾದರೂ ಅವು ದ್ರವರೂಪದ ನೀರು ಅಥವಾ ಹಿಮದಿಂದ ರೂಪುಗೊಂಡಿರುವ ಕಾರಣ ಅವನ್ನು ನೀರಿನ ಆವಿ ಹಾಗೂ ಇನ್ನಿತರ ಅನಿಲಗಳಿಂದ ಪ್ರತೇಕಿಸಿ ನೋಡಲಾಗುತ್ತದೆ. ಜಾಗತೀಕರಣದ ನಂತರ ಮಾನವ ಚಟುವಟಿಕೆಯು ವಾಯುಮಂಡಲದಲ್ಲಿನ ಹಸಿರುಮನೆ ಅನಿಲಗಳ ಪ್ರಮಾಣವನ್ನು ಹೆಚ್ಚಿಸುತ್ತಾ CO2, ಮೀಥೇನ್, ಹವಾಗೋಳದ O3, ಸಿ.ಎಫ್. ಸಿಗಳು ಹಾಗೂ ನ್ಯೆಟ್ರಸ್ ಆಕ್ಸ್ಯೆಡ್ಗಳಿಂದಾಗುವ ವಿಕಿರಣಾತ್ಮಕ ಒತ್ತಡವನ್ನು ಹೆಚ್ಚಿಸುತ್ತಿದೆ.
No comments:
Post a Comment