Search This Blog

Thursday, December 15, 2011

ಹಳ್ಳಿಗಳಿಂದ ಕಣ್ಮರೆಯಾಗುತ್ತಿರುವ ಹಳ್ಳಿಕಾರ್ ರಾಸು ತಳಿ


ಕೆಲವೇ ದಶಕಗಳ ಹಿಂದೆ ಕರ್ನಾಟಕದ ದೇಸೀಪಶು ಸಂಪತ್ತು ಹೇರಳಅದರಲ್ಲೂ ಹಳ್ಳಿಕಾರ್ಅಮೃತ್ ಮಹಲ್ಮತ್ತು ಖಿಲಾರಿ ತಳಿ ಎತ್ತು-ಹಸುಗಳು ಇಡೀ ದೇಶದಲ್ಲಿ ನಮ್ಮ ರಾಜ್ಯದ ಘನತೆಗೆ ಮತ್ತೊಂದು ಪ್ರತೀಕಇದಕ್ಕೆಕಾರಣ ಹಲವುಇವುಗಳ ಬಿರುಸುಗತ್ತು-ಗಾಂಭೀರ್ಯಚುರುಕುತನಕಷ್ಟ ಸಹಿಷ್ಣುತೆ ಮತ್ತು ಅಪರಿಮಿತದುಡಿಮೆ ಅಪಾರಉತ್ತರ ಪ್ರದೇಶದ ಸಿಂಧಿಹರಿಯಾಣಗೀರ್ ಮತ್ತು ಶಾಹಿವಾಲ್ ತಳಿಯ ರಾಸುಗಳುಹೈನಿಗೆ ಹೆಸರುವಾಸಿಯಾದರೆ  ರಾಸುಗಳು ವ್ಯವಸಾಯ ಮತ್ತು ಸಾರಿಗೆಗೆ ಪ್ರಖ್ಯಾತ
 
ಹಳ್ಳಿಕಾರ್ ಎತ್ತುಗಳದೂಮತ್ತೂ ವೈಶಿಷ್ಟಇವುಷೋಕಿಗೆ ಎತ್ತುಸಾಕುವವರಿಗೂ ಮತ್ತುಶ್ರಮದ ದುಡಿಮೆಗೆಸಾಕುವವರಿಗೂಅಚ್ಚುಮೆಚ್ಚು.ಬರಪರಿಸ್ಥಿತಿಯಲ್ಲಿಯೂಇವುಗಳ ತಾಳಿಕೆ ಅಪಾರ.ಇದರೊಂದಿಗೆ ಹಳ್ಳಿಕಾರ್ಎತ್ತುಗಳುವಾತಾವರಣಕ್ಕೆ-ಹೊಸಬರಿಗೆ ಒಗ್ಗಿಕೊಳ್ಳುವುದೂ ಸೊಗಸು ಎತ್ತುಗಳ ಪಾಲನೆ-ಪೋಷಣೆಯನ್ನೂ ಸಣ್ಣಮಕ್ಕಳೂ ಸರಾಗವಾಗಿ ಮಾಡುವಷ್ಟು ಮಟ್ಟದ ವರ್ತನೆಇಂಥ ಅಪರೂಪದ ಗೂಣದ ಎತ್ತುಗಳಪಾಲನೆ-ಪೋಷಣೆ ಮೈಸೂರು ಸುತ್ತಮುತ್ತಲಿನ ಜಿಲ್ಲೆಗಳು ಮತ್ತು ತಮಿಳುನಾಡಿನ ಉತ್ತರ ಜಿಲ್ಲೆಗಳಲ್ಲಿವಿಶೇಷವಾಗಿತ್ತುಇಲ್ಲೆಲ್ಲಾ ಹಳ್ಳಿಕಾರ್ ಎತ್ತುಗಳನ್ನೇ ವಿಶೇಷವಾಗಿ ಸಾಕಾಣಿಕೆ ಮಾಡುತ್ತಿದ್ದರ ಕಾರಣವೂ ಇದೆ. ಭಾಗದ ಕೆಂಪುಮಿಶ್ರಿತ ಮಣ್ಣುಗಳು ದೀರ್ಘಕಾಲ ತೇವಾಂಶ ಹಿಡಿದಿಡುವುದಿಲ್ಲಒಂದೆರಡು ಹದ ಮಳೆ ಬಿದ್ದಕೂಡಲೇ ಭೂಮಿ ಉಳುಮೆ ಮಾಡಬೇಕುಉಳುಮೆ ಮಾಡುವುದು ತಡವಾದರೆ ಹಸಿ ಆರಿಹೋಗುತ್ತದೆಉಳುಮೆಸರಾಗವಾಗಿ ಆಗುವುದಿಲ್ಲಶೀಘ್ರವಾಗಿ ಉಳುಮೆ ಮಾಡಿ ಮುಗಿಸಲು ಹಳ್ಳಿಕಾರ್ ರಾಸುಗಳ ಚುರುಕುತನಶ್ರಮಸಹಾಯಕಮಳೆಯಾಶ್ರಿತ ಅಥವಾ ನೀರಾವರಿ ಆಶ್ರಿತ ಭೂಮಿಯಾಗಲಿ ಇವುಗಳ ಉಳುಮೆ-ದುಡಿಮೆ ಸಲೀಸು.
  
ಸರಕು ಸಾಗಿಸುವಲ್ಲಿಯೂಹಳ್ಳಿಕಾರ್ ರಾಸುಗಳದ್ದುವೈಶಿಷ್ಟ್ಯತೆ ಭರ್ತಿ ಹೊರೆಇರುವ ಗಾಡಿಗಳನ್ನುಎಳೆದುಕೊಂಡು ಒಂದೇದಿನದಲ್ಲಿ 30ಮೈಲುಗಳಿಗೂ ಹೆಚ್ಚುನಡಿಯುವಸಾಮರ್ಥ್ಯ. ಆದ್ದರಿಂದಲೇ ಭಾಗದ ರೈತರಿಗೂಹಿಂದೆ ಇದ್ದರಾಜ-ಮಹಾರಾಜರಿಗೂಹಳ್ಳಿಕಾರ್ ಅಚ್ಚುಮೆಚ್ಚಿನರಾಸುಗಳುಮೈಸೂರುಸೀಮೆಯ ಮತ್ತು ಉತ್ತರ ತಮಿಳುನಾಡಿನ ಅರಸರು ಹಳ್ಳಿಕಾರ್ ಎತ್ತುಗಳ ಸಾಕಾಣಿಕೆಗೆ ವಿಶೇಷ ಮುತುವರ್ಜಿವಹಿಸಿದ್ದರುತಳಿ ಶುದ್ದತೆ ಕಾಪಾಡಲು ಗಮನ ಕೊಟ್ಟಿದ್ದರುಸಾಮಾನ್ಯ ಸಂದರ್ಭಗಳಂತೆಯೇಯುದ್ದಕಾಲದಲ್ಲಿಯೂ ಸಾರಿಗೆಗೆ ಸರಕು ಸಾಗಾಣಿಕೆಗೆ ಬಳಸುತ್ತಿದ್ದರುಅತಿಭಾರವಾದ ಫಿರಂಗಿ ಗಾಡಿಗಳನ್ನೂ,ಮದ್ದು-ಗುಂಡು ತುಂಬಿದ ಗಾಡಿಗಳನ್ನು ಸರಾಗವಾಗಿ ಎಳೆದೊಯ್ಯುತ್ತಿದ್ದವುಗಾಡಿ ಹೊಡೆಯುವಾತ ಮೈ ಮರೆತುನಿದ್ದೆ ಮಾಡಿದರೂ ಅಪಘಾತ ಸಂಭವಿಸದಂತೆ ಜಾಗರೂಕತೆಯಿಂದ ಗಾಡಿಗಳನ್ನು ಸೇರಬೇಕಾದ ಪರಿಚಿತ ಗಮ್ಯಸೇರಿಸುವುದರಲ್ಲಿಯೂ ಇವು ಹೆಸರುವಾಸಿ.
  
ಮೈಸೂರು ಸೀಮೆಯಲ್ಲಿ ರಾಸು ಸಾಕಾಣಿಕೆಯನ್ನೇ ಜೀವನೋಪಾಯಕ್ಕೆ ಕಸುಬು ಮಾಡಿಕೊಂಡವರ ಸಂಖ್ಯೆಹೆಚ್ಚಾಗಿತ್ತುಇವರು ತಮ್ಮ ರಾಸುಗಳನ್ನು ಒಂದೆಡೆ ಇರಿಸುತ್ತಿದ್ದ ಸ್ಥಳಗಳಿಗೆ  ಹಟ್ಟಿ ಎನ್ನುತ್ತಿದ್ದರು. (ಇಂದಿಗೂಮೈಸೂರು ಸೀಮೆಯಲ್ಲಿ  ಪದ ಬಳಕೆಯಲ್ಲಿದೆ ದನಗಾಹಿಗಳಿಗೆ ಹಟ್ಟಿಕಾರರೆಂದು ಹೆಸರು ಬಂತುಇವರುನಿರ್ವಹಣೆ ಮಾಡುತ್ತಿದ್ದ ರಾಸುಗಳಿಗೂ ಹಟ್ಟಿಕಾರ್ ದನದಿಂದ ಹಳ್ಳಿಕಾರ್ ದನ ಎಂಬ ಹೆಸರು ಬಂದಿರಬಹುದು.

ಟಿಪ್ಪು ಸುಲ್ತಾನ್ ಆಳ್ವಿಕೆ ಸಂದರ್ಭದಲ್ಲಿಯೂ ಹಳ್ಳಿಕಾರ್ ಎತ್ತುಗಳ ಪಾಲನೆ-ಪೋಷಣೆಗೆ ಮತ್ತಷ್ಟು ಗಮನನೀಡಲಾಯಿತುಈತನ ಸೈನ್ಯಕ್ಕೆ ಸೇರಿದ ಹಟ್ಟಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಳ್ಳಿಕಾರ್ ಎತ್ತುಗಳಿದ್ದವುಎತ್ತುಗಳು ಯುದ್ದ ಸಂದರ್ಭಗಳಲ್ಲಿ ಸರಕು ಸಾಗಾಣಿಕೆಗೆ ಬಳಕೆಯಾಗುತ್ತಿದ್ದವುಇವುಗಳ ಚುರುಕುತನ ಗಮನಿಸಿದ್ದಟಿಪ್ಪು  ಎತ್ತುಗಳ ನಿರ್ವಹಣೆಗೆ ವಿಶೇಷ ಗಮನ ನೀಡಿದ್ದ ಎನ್ನಲಾಗುತ್ತದೆ.

ಹಳ್ಳಿಕಾರ್ ತಳಿಯ ಹಸುಗಳ ಹಾಲು ವಿಶೇಷ ವೈದ್ಯಕೀಯ ಗುಣ ಹೊಂದಿದೆ ಎಂದು ಆಯುವರ್ೇದ ಪಂಡಿತರುಅಭಿಪ್ರಾಯಪಡುತ್ತಾರೆ ಹಸುಗಳ ಹಾಲನ್ನು ಕುಡಿದು ಬೆಳೆದವರು ಚುರುಕಾಗಿ ಬಲಿಷ್ಟವಾಗಿ ಬೆಳೆಯುತ್ತಾರೆಎಂಬ ಭಾವನೆ ಇತ್ತುಇದರಿಂದಲೇ ಹಳ್ಳಿಗರು  ತಳಿಯ ಹಸುಗಳನ್ನು ಸಾಕಲು ಮುತುವಜರ್ಿತೋರಿಸುತ್ತಿದ್ದರುಹಳ್ಳಿಕಾರ್ ಹಸುಗಳ ಹಾಲಿನಿಂದ ಮಾಡಿದ ಮೊಸರು-ಮಜ್ಜಿಗೆ-ತುಪ್ಪಕ್ಕೆ ವಿಶಿಷ್ಟ ಸ್ವಾದ ಮತ್ತುರುಚಿಇವುಗಳ ತುಪ್ಪದಿಂದ ತಯಾರಿಸಿದ ತಿಂಡಿಗಳನ್ನು ಹೆಚ್ಚುದಿನ ಇಡಬಹುದುಇಂಥ ಹಳ್ಳಿಕಾರ್ ಎತ್ತುಗಳಹಾಲು-ಮೊಸರು-ಮಜ್ಜಿಗೆ ಕುಡಿದು ಬೆಳೆದವರಲ್ಲಿ ರೋಗನಿರೋಧಕತೆ ಹೆಚ್ಚು ಎನ್ನುವುದರಲ್ಲಿ ಉತ್ಪ್ರೇಕ್ಷೆಯೇನೂಇಲ್ಲ ಹಸುಗಳು ಹಾಲು ನೀಡುವುದರೊಂದಿಗೆ ಉಳುಮೆಗೂ-ಸಾರಿಗೆಗೂ ಸೈ.

ಜಾತ್ರೆಎರಡೇ ಎರಡು ದಶಕಗಳ ಹಿಂದೆ ಹಳ್ಳಿಕಾರ್ ಎತ್ತುಗಳೇ ವಿಶೇಷವಾಗಿ ಇರುತ್ತಿದ್ದ ದನದಜಾತ್ರೆವೈಭವದಿಂದ ನಡೆಯುತ್ತಿದ್ದವುಇಂಥ ಸಂದರ್ಭಗಳಲ್ಲಿ  ತಳಿಯ ರಾಸುಗಳನ್ನು ನೋಡಲು-ಕೊಳ್ಳಲುಅವಕಾಶಚಾಮರಾಜನಗರಕೊಳ್ಳೇಗಾಲಯಳಂದೂರುನಂಜನಗೂಡುಮೈಸೂರುಹಳ್ಳಿಮೈಸೂರುಕೃಷ್ಣರಾಜನಗರಸಾಲಿಗ್ರಾಮಪಿರಿಯಾಪಟ್ಟಣಬೆಟ್ಟದಪುರಹುಣಸೂರುಮಂಡ್ಯ,ಶ್ರೀರಂಗಪಟ್ಟಣಪಾಂಡವಪುರನಾಗಮಂಗಲಮದ್ದೂರುಮಳವಳ್ಳಿಕೃಷ್ಣರಾಜಪೇಟೆಹಾಸನಮತ್ತು ಸುತ್ತಮುತ್ತಲಿನ ತಾಲೂಕುಗಳುಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ರೈತರು ಹಳ್ಳಿಕಾರ್ಎತ್ತುಗಳ ಜಾತ್ರೆಗಾಗಿಯೇ ನಿರೀಕ್ಷಿಸುತಿದ್ದರುಅಯ್ಯನಗುಡಿ(ಕೆಂಗಲ್)ಘಾಟಿ ಸುಬ್ರಮಣ್ಯಚುಂಚನಕಟ್ಟೆ,ಹಾಸನದೇವರಗುಡ್ಡರಾಮನಾಥಪುರರಾಮಪುರ ಜಾತ್ರೆಗಳು ಬಹಳ ಪ್ರಸಿದ್ದಿಇವು ನಡೆಯುವಸ್ಥಳಗಳಲ್ಲಿ ಮೈಲುಗಟ್ಟಲೇ ದೂರಕ್ಕೆ ಜಾತ್ರೆ ವಿಸ್ತರಿಸುತ್ತಿತ್ತುರೈತಾಪಿಗಳ ಪಾಲಿಗೆ ಅದೊಂದು ದೊಡ್ಡ ಸಂಭ್ರಮ.ವಿಶೇಷವಾಗಿ ಸಾಕಿದ ರಾಸುಗಳಿಗೆ ಬಹುಮಾನ ನೀಡಲಾಗುತ್ತಿತ್ತುಜೊತೆಗೆ ಇಂಥ ರಾಸುಗಳ ಪಾಲಕರೈತರಿಗೂ ಸನ್ಮಾನಇಂಥ ಸನ್ಮಾನ ಪಡೆಯುವುದು ರೈತಾಪಿ ವರ್ಗದಲ್ಲಿ ಹೆಮ್ಮೆಯ ಸಂಗತಿ

ಖಾಯಿಷ್ ಅಂದರೆ ಖುಷಿಗೆ-ಷೋಕಿಗೆ ಹಳ್ಳಿಕಾರ್ ಎತ್ತುಗಳನ್ನು ಸಾಕುವವರು ಇದಕ್ಕಾಗಿಯೇ ಸಾವಿರಾರುರುಪಾಯಿಗಳನ್ನು ವ್ಯಯಿಸುತ್ತಿದ್ದರುಮಾಮೂಲಿಯಾಗಿ ನೀಡುವ ಭತ್ತದ ಹುಲ್ಲು-ರಾಗುಹುಲ್ಲು ಜೊತೆಗೆಬೂಸಾ-ಹಿಂಡಿಕಾಯಿ-ಕೊಬ್ಬರಿ-ಪುರಿ ಇತ್ಯಾದಿಗಳನ್ನು ನೀಡುತ್ತಿದ್ದರುತುಪ್ಪದಲ್ಲಿ ನೆನಸಿದ ರೊಟ್ಟಿಗಳನ್ನುಪ್ರೀತಿಯಿಂದ ತಿನ್ನಿಸುತ್ತಿದ್ದರುಜೊತೆಗೆ ಇದರದೇ ತಳಿಯ ಹೈನುರಾಸುಗಳ ಸೇರುಗಟ್ಟಲೇ ಹಾಲುಕುಡಿಸುತ್ತಿದ್ದರು ರಾಸುಗಳಿಗೆ ಮಲಗಲು ವಿಶೇಷವಾದ ಹಾಸಿಗೆಗಳನ್ನು ಮಾಡಿಸುತ್ತಿದ್ದರುಒಟ್ಟಾರೆ ಇದುಹಳ್ಳಿಕಾರ್ ರಾಸುಗಳ ಅತ್ಯಂತ ವೈಭವದ ದಿಗಳುಇಂಥ ದಿನಗಳು ರೈತರ ಸಮೃದ್ದಿ ತೋರಿಸುತ್ತಿದ್ದವು.

ವಿಶೇಷ ದಿನಗಳಲ್ಲಿಹಳ್ಳಿಕಾರ್ರಾಸುಗಳಿಗಾಗಿಯೇಮಕ್ಮಲ್ ಬಟ್ಟೆಯಿಂದಗೌಸು ಹೊಲಿಸಿಹೊದಿಸುತ್ತಿದ್ದರುಎರಡೂಕೊಂಬುಗಳಿಗೂ ಬೆಳ್ಳಿಅಣಸು ಹಾಕುತ್ತಿದ್ದರು.ಚಿನ್ನದ ಅಣಸುಹಾಕುವಂಥವರೂಇದ್ದರುಚಿನ್ನದಅಭರಣಗಳಿಂದರಾಸುಗಳ ಹಣೆಅಲಂಕರಿಸುತ್ತಿದ್ದರು.ಬಾಲಕ್ಕೆ ಕುಚ್ಚುಇದಾದ ನಂತರ ದೃಷ್ಟಿ ತಾಕದಿರಲೆಂದು ರಾಸುಗಳ ಕುತ್ತಿಗೆಗೆ ಕರಿಹುರಿ ಕಟ್ಟುತ್ತಿದ್ದರು.ರೈತಾಪಿಗಳು ತಾವು ಸಾಕಿದ ಹಳ್ಳಿಕಾರ್ ರಾಸುಗಳನ್ನು ವಿಧವಿಧವಾಗಿ ಅಲಂಕರಿಸಿ ಖುಷಿಪಡುತ್ತಿದ್ದರು.ಮೆರವಣಿಗೆಯಿಂದ ಬಂದ ರಾಸುಗಳನ್ನು ಹೆಂಗಳೆಯರು ಆರತ್ತಿ ಎತ್ತಿ ಸ್ವಾಗತ್ತಿದ್ದರು ರಾಸುಗಳು ಮನೆಯಸಂಪತ್ತು ಎಂದು ರೈತರು ತಿಳಿದಿದ್ದರಿಂದಲೇ  ಎಲ್ಲ ಸಂಭ್ರಮ

ಪ್ರಸ್ತುತ ಪರಿಸ್ಥಿತಿಕಳೆದೆರಡು ದಶಕಗಳಿಂದ ಹಳ್ಳಿಗಳಲ್ಲಿ ಹಳ್ಳಿಕಾರ್ ರಾಸುಗಳ ಚಿತ್ರಣ ಬಹುತೇಕ ಬದಲಾಗಿದೆ.ಬಹುತೇಕ ರೈತರ ಹಟ್ಟಿಗಳಿಂದ  ರಾಸುಗಳು ನಿರ್ಗಮಿಸಿವೆಉಳುಮೆಗೆ-ಸರಕು ಸಾಗಾಣಿಕೆಗೆಟ್ರಾಕ್ಟರ್-ಟಿಲ್ಲರ್ಗಳನ್ನೇ ಅವಲಂಬಿಸಲಾಗಿದೆಇದು ಅನಿವಾರ್ಯ ಇರಬಹುದುಆದರೆ ಕೊಟ್ಟಿಗೆಗೊಬ್ಬರಕ್ಕಾಗಿಯೂ ರಾಸುಗಳನ್ನು ಅವಲಂಬಿಸುವಂಥ ಮನಸ್ಥಿತಿ ಭಾರಿ ಕಡಿಮೆಯಾಗಿದೆರಸಗೊಬ್ಬರಗಳನ್ನೇಅವಲಂಬಿಸಿದ್ದಾರೆಇನ್ನು ಹಾಲಿಗಾಗಿ  ತಳಿಯ ಹೈನುರಾಸುಗಳನ್ನು ಸಾಕಾಣಿಕೆ ಮಾಡುವ ಪ್ರವೃತ್ತಿಕಣ್ಮರೆಯಾಗಿದೆಇದರೊಂದಿಗೆ ಹಳ್ಳಿಕಾರ್ ಎತ್ತುಗಳನ್ನು ಸಾಕಿರುವಂಥವರಲ್ಲಿ ಬಹುತೇಕರು ಇದರ ತಳಿಶುದ್ದತೆಗೂ ಗಮನ ನೀಡುತ್ತಿಲ್ಲ.

ಇವೆಲ್ಲದರ ಪರಿಣಾಮ ಹಳ್ಳಿಗಳಲ್ಲಿ ಹಳ್ಳಿಕಾರ್ ಎತ್ತುಗಳ ಸಂಖ್ಯೆ ಕ್ಷೀಣಿಸಿದೆಇದೇ ಪ್ರವೃತ್ತಿ ಮುಂದುವರಿದರೆ ಇನ್ನುಕೆಲವೇ ವರ್ಷಗಳಲ್ಲಿ ಚಿತ್ರಗಳಲ್ಲಿ ಮಾತ್ರ ಹಳ್ಳಿಕಾರ್ ರಾಸು ಕಾಣುವಂಥ ಪರಿಸ್ಥಿತಿ ಉದ್ಬವಿಸಬಹುದು

It is written by Kumar Raitha


Hanumaan Phal



The following fruits are Hanumaan phal. Any body knows botanical name of this Hanumaan fruit. This is good for dray land. taste is excellent and easy to grow.






Tuesday, December 6, 2011

farmers rice variety in Ramanagara

It is 'kaagi saali' black rice variety, it has medicinal value and it grows under irrigation 

condition. It is one of the farmer variety conserving from generation to generation. It give 

good yield, up to 2500 to 2800 kilo per acre. It is available withSurendra N R Surya and his cell 

number is 9980807024



Saturday, December 3, 2011

for hair dry

ಬೆಳಗಾಗೆದ್ದು ಶರೀರಕ್ಕೆ ಲವಲವಿಕೆ ತರುವ ನಿಮ್ಮ ನೆಚ್ಚಿನ ಪೇಯ ಕಾಫಿ, ನಿಮ್ಮ ಚೆಲುವನ್ನೂ ಹೆಚ್ಚಿಸಬಲ್ಲುದು...! ಎಂಬುದು?

ಅಕಾಲದಲ್ಲಿ ಅಲ್ಲಲ್ಲಿ ನೆರೆಯುವ ತಲೆಗೂದಲನ್ನು ಅಡಗಿಸುವುದರಲ್ಲಿ ಕಾಫಿಯದು ಎತ್ತಿದ ಕೈ. ಮದರಂಗಿ ಎಲೆಗಳನ್ನು ಕಡೆದು 


ತಲೆಗೆ ಲೇಪಿಸುವುದು ನಿಮಗೆ ತಿಳಿದಿದೆ. ಈ ಮಿಶ್ರಣಕ್ಕೆ ಒಂದು ಚಿಕ್ಕ ಚಮಚದಷ್ಟು ಕಾಫಿ ಪುಡಿ ಬೆರೆಸಿ ಕದಡಿ. ಅಥವಾ ದಪ್ಪನೆಯ 


ಡಿಕಾಕ್ಷನ್‌ ತೆಗೆದು ಬೆರೆಸಿ.

ಅನಂತರ ಈ ಮಿಶ್ರಣವನ್ನು ತಲೆಗೆ ಹಚ್ಚಿ ಒಂದು ತಾಸು ಬಿಟ್ಟು ತೊಳೆಯಿರಿ. ಮದರಂಗಿಯ ಕೆಂಪು ..