
ಓ ರೈತ ನೀ ಎಚ್ಚರವಾಗು, ನೀ ಎಚ್ಚರವಾಗು
ನೀ ಕೈಕಟ್ಟಿ ಕೂರಬೇಡ, ನೀ ಎದ್ದೇಳು
ಭೂ ತಾಯಿಗೆ ದ್ರೋಹ ಮಾಡಬೇಡ
ಭೂ ತಾಯಿಗೆ ವಿಷವನ್ನು ಹಾಕಬೇಡ
ಮರಗಿಡಗಳನ್ನು ನೆಟ್ಟು ಪರಿಸರ ಕಾಪಾಡು
ಪ್ರಕೃತಿಗೆ ನೀವೇನು ಕೊಡುವೆ
ಭೂ ತಾಯಿಗೆ ನೀವೇನು ಬಸಿಯುವೆ
ಭೂ ತಾಯಿ ನಿನ್ನ ಸಾಕುವಳು
ಭೂ ತಾಯ ಪ್ರಾಣ ನೀನು ತೆಗೆಯುವೆ
ಭೂ ತಾಯಿಯ ಜೀವ ಸತ್ವ ಉಳಿಸು
ರಾಸಾಯನಿಕ ಗೊಬ್ಬರ ಬಳಸಬೇಡ
ರೋಗಕ್ಕೆ ಕೀಟನಾಶಕ ಬಳಸಬೇಡ
ಗೋಮೂತ್ರ ಔಷದ ಸಿಂಪಡಿಸು
ನಾಟಿ ಬೀಜಗಳನ್ನು ಉಳಿಸು
ಹೈಬ್ರಿಡ್ ತಳಿಗಳನ್ನು ಹೋಡಿಸು
ರೈತನ ಮಗನಾಗಿ ಪೇಟೆಗೆ ಹೋಗಬೇಡ
ಸುಸ್ಥಿರ ಕೃಷಿಯನ್ನು ಮಾಡು
ವಿಷದ ಬೆಳೆ ಬೆಳೆದು ಅಫರಾದಿಯಾಗಬೇಡ
ನೀಹುಟ್ಟಿರುವುದು ಭೂಮಿಗಾಗಿ
ಭೂಮಿತಾಯಿಯನ್ನು ಕಾಪಾಡು
No comments:
Post a Comment