Pages

Wednesday, April 22, 2009

ಭಾರತದಲ್ಲಿ ಚುನಾವಣೆಯ ಬಿಸಿ

ಹತ್ತು ತಿಂಗಳ ಹಿಂದೆ ನಮ್ಮ ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆ ಕದನ ನೆಡೆದಿದೆ. ಮತ್ತೆ ರಾಜ್ಯದ ಜನ ಚುನಾವಣೆಗೆ ತಮ್ಮ ದಿನನಿತ್ಯದ ಕೆಲಸಕ್ಕೆ ರಜಾ ಹಾಕಿ ಮತ ಚಲಾಯಿಸಬೇಕಿದೆ. ಮತದಾರ ತನ್ನ ಓಟನ್ನು ಹಾಕುವುದಕ್ಕೆ ತುದಿಗಾಲಲ್ಲಿ ನಿತ್ತಿದ್ದಾನೆ ನಿಜ. ಮತ ಹಾಕುವಾಗ ಸ್ವಲ್ಪ ಯೋಚಿಸಿ ಮತ ಹಾಕಿ. ವ್ಯಕ್ತಿ ಅಥವಾ ಪಕ್ಷ ಮುಖ್ಯ ಎಂಬ ವಿಚಾರ ಮನಸಿನಲ್ಲಿರಲಿ. ನನ್ನ ಪ್ರಕಾರ ಯಾವದೇ ದೇಶ ರೈತರನ್ನು ಕಡೆಗಣಿಸಿದರೆ ಅಭಿವೃದ್ಧಿ ಅಸಾಧ್ಯ. ಅನ್ನದಾತನೆ ನಮ್ಮಲ್ಲರಿಗೆ ಅನ್ನ ಕೂಡುವ. ಅನ್ನ ದೇವರ ಮುಂದೆ ಅನ್ಯ ದೇವರು ಉಂಟೆ. ನಮ್ಮ ರಾಜ್ಯದಲ್ಲಿ ರೈತರ ಸ್ಥಿತಿ-ಗತಿ ಬಹಳ ಚಿಂತಾಜನಕವಾಗಿದೆ. ಯಾವ ಪಕ್ಷ ರೈತರಿಗೆ ಹೆಚ್ಚಿನ ಅವಕಾಶ ಕೂಡುತ್ತೆ ಅಂತಹ ಪಕ್ಷಕ್ಕೆ ಮತಹಾಕಿ. ರೈತರ ಬಗ್ಗೆ ಡೋಂಗಿ ಭಾಷಣ ಮಾಡುವ ರಾಜಕಾರಣಿಗಳಿಗೆ ಸರಿಯಾದ ಪಾಠ ಕಲಿಸಿ.
ಅನ್ನದಾತ ಸುಖಿಭವ.........

No comments:

Post a Comment